ಕೊಕ್ಕಡ: ಜೆಸಿಐ ಕಪಿಲಾ ಘಟಕದ ವತಿಯಿಂದ ಅಣಬೆ ಬೇಸಾಯ ತರಬೇತಿ ಕಾರ್ಯಗಾರ

0

ಕೊಕ್ಕಡ: ಜೆಸಿಐ ಕಪಿಲಾ ಘಟಕದ ವತಿಯಿಂದ ಅಣಬೆ ಕೃಷಿ ತರಬೇತಿಯನ್ನು ಗ್ರಾಮಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿಯ ವಠಾರದಲ್ಲಿ ಜೂ.23ರಂದು ಆಯೋಜಿಸಲಾಗಿತ್ತು ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಜೇಸಿ ವಿದ್ಯೆಂದ್ರ ಗೌಡ ಮುನ್ನಡೆಸಿದರು.

ಹವಾಮಾನವನ್ನು ಹೊಂದಿಕೊಂಡು ಬೆಳೆಯವ ಸಾಮರ್ಥ್ಯವಿದೆ. ಅಣಬೆ ಕೃಷಿ ಮಾಡಲು ವಿವಿಧ ಹಂತಗಳಿವೆ. ಮೊದಲು ಭತ್ತದ ಹುಲ್ಲನ್ನು 4ರಿಂದ 5ಸೆಂ.ಮೀ. ಉದ್ದದ ತಂಡುಗಳಾಗಿ ಕತ್ತರಿಸಿ ಸುಮಾರು 3ರಿಂದ 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು. ಹುಲ್ಲಿನಲ್ಲಿರುವ ನೀರನ್ನೆಲ್ಲಾ ಬಸಿದು ಕುದಿಯುವ ನೀರಿನಲ್ಲಿ 2 ಗಂಟೆಗಳ ಕಾಲ ನೆನೆಸಬೇಕು. ಕುದಿಯುವ ನೀರಿನಿಂದ ಹುಲ್ಲನ್ನು ತೆಗೆದು ಅದನ್ನು ಒಣಗಿಸಿ ಹೆಚ್ಚಿನ ನೀರಿನ ಅಂಶವನ್ನು ತೆಗೆಯಬೇಕು. ಒಣಗಿದ ಹುಲ್ಲನ್ನು ಪಾಲಿಥೀನ್ ಚೀಲಗಳಿಗೆ ತುಂಬಬೇಕು, ಒಂದು ಚೀಲಕ್ಕೆ ಒಂದು ಕೆ.ಜಿ.ಯಷ್ಟು ಹುಲ್ಲು ಹಾಗೂ 500 ಗ್ರಾಮ್ ಅಣಬೆ ಬೀಜವನ್ನು ಹಂತ ಹಂತವಾಗಿ ಸಮಾನಾಗಿ ಹರಡಿ ತುಂಬಬೇಕು. ಚೀಲದ ಬಾಯನ್ನು ಭದ್ರವಾಗಿ ಕಟ್ಟಬೇಕು. ನಂತರ ಚೀಲಗಳನ್ನು ತಂಪಾಗಿರುವ ಸ್ಥಳದಲ್ಲಿ 20ರಿಂದ 30 ದಿನಗಳ ಕಾಲ ಇಡಬೇಕು. ಆಗ ಅಣಬೆ ಬೀಜ ಮೊಳಕೆಯೊಡೆದು ಬೆಳೆದಿರುತ್ತದೆ. ಚೀಲಗಳಿಗೆ ಬ್ಲೇಡ್‌ನಿಂದ ರಂಧ್ರಗಳನ್ನು ಮಾಡಬೇಕು. ದಿನಕ್ಕೆ 2ರಿಂದ 3 ಬಾರಿ ನೀರು ಚಿಮುಕಿಸುತ್ತಿರಬೇಕು. ಲಚೀಲಕ್ಕೆ ರಂಧ್ರಗಳನ್ನು ಮಾಡಿದ ಒಂದು ವಾರದ ಒಳಗೆ ಹುಲ್ಲಿನ ಪಿಂಡಿಯ ಸುತ್ತಲೂ ಅಣಬೆ ಕಾಣಸಿಗುತ್ತದೆ.

ಪ್ರತಿ 3 ದಿನಕ್ಕೊಮ್ಮೆ ಅಣಬೆ ಕೊಯಿಲು ಮಾಡಬಹುದು ಎಂದು ತಿಳಿಸಿದರು. ಕಾರ್ಯಗಾರರ ದಲ್ಲಿ ಜೆಸಿಐ ಘಟಕದ ಅಧ್ಯಕ್ಷರಾಗಿರುವ ಜೇಸಿ ಸಂತೋಷ್ ಜೈನ್, ಕಾರ್ಯದರ್ಶಿ ಜೇಸಿ ಅಕ್ಷತ್ ರೈ, ಲೇಡಿ ಜೇಸಿ ಅಧ್ಯಕ್ಷ ಜೇಸಿ ಶೋಭಾ, ಪೂರ್ವ ಅಧ್ಯಕ್ಷ ಜೇಸಿ ಜೆಎಫ್ಎಂ ಕೆ ಶ್ರೀಧರ್ ರಾವ್, ಅರಣ್ಯ ಸಮಿತಿ ಅಧ್ಯಕ್ಷ ಧನಂಜಯ ಗೌಡ ಮತ್ತು ಶಿವಪ್ರಸಾದ್ ಹಾಗೂ ಇತರರು ಕಾರ್ಯಗಾರದಲ್ಲಿ ಭಾಗವಹಿಸಿದರು.

p>

LEAVE A REPLY

Please enter your comment!
Please enter your name here