ಪುಂಜಾಲಕಟ್ಟೆ: ಕುಕ್ಕಳ ಎಸ್.ಡಿ.ಪಿ.ಐ ಪಕ್ಷದ ಸಂಸ್ಥಾಪನ ದಿನಾಚರಣೆ

0

ಪುಂಜಾಲಕಟ್ಟೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುಂಜಾಲಕಟ್ಟೆ, ಕುಕ್ಕಳ ಬೂತ್ ಸಮಿತಿ ವತಿಯಿಂದ ಪಕ್ಷದ 16ನೇ ವರ್ಷದ ಸಂಸ್ಥಾಪನ ದಿನಾಚರಣೆಯನ್ನು ಪುಂಜಾಲಕಟ್ಟೆ ಜಂಕ್ಷನ್ ನಲ್ಲಿ ಧ್ವಜಾರೋಹಣದ ಮೂಲಕ ಆಚರಿಸಲಾಯಿತು.

ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ ಕುಕ್ಕಳ ಬೂತ್ ಅಧ್ಯಕ್ಷ ಝಕರಿಯ್ಯಾ ಪುಂಜಾಲಕಟ್ಟೆ ವಹಿಸಿ ಧ್ವಜಾರೋಹಣಾಗೈದರು.ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನಸಭಾ ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ ಸಂದೇಶ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಪಕ್ಷದ ಹಿತೈಷಿ ಊರಿನ ಹಿರಿಯರಾದ ಉಮರ್ ಪುಂಜಾಲಕಟ್ಟೆ, ಮಡಂತ್ಯಾರು ಗ್ರಾ.ಪಂ. ಸದಸ್ಯ ಹನೀಫ್ ಪುಂಜಾಲಕಟ್ಟೆ, ಬದ್ರಿಯಾ ಜುಮಾ ಮಸೀದಿ ಪುಂಜಾಲಕಟ್ಟೆ ಉಪಾಧ್ಯಕ್ಷ ಅಬ್ದುಲ್ ಹಮೀದ್ ಮಲ್ಪೆ, ನುಸ್ರತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಷನ್ ಪುಂಜಾಲಕಟ್ಟೆ ಅಧ್ಯಕ್ಷ ನೌಷಾದ್ ಇಂಜಿನಿಯರ್, ಕಾವೇರಿ ಟ್ರೇಡರ್ಸ್ ಮಾಲಕ ಯಹ್ಯಾ, MRS ಕಾಂಪ್ಲೆಕ್ಸ್ ಮಾಲಕ ಉಮರ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here