ಬೆಳ್ತಂಗಡಿ: ಶ್ರೀ ಧ.ಮಂ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಪದ ಪ್ರಧಾನ

0

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯಲ್ಲಿ ಮಂತ್ರಿಮಂಡಲದ ಪದ ಪ್ರಧಾನ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಪೊಲೀಸ್ ಇಲಾಖೆಯ ಪರೀದೀಕ್ಷಕ ಮುರುಳಿಧರ್, ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಧನ್ಯ ಕುಮಾರ್, ಶಾಲಾ ಮುಖ್ಯ ಶಿಕ್ಷಕಿ ಹೇಮಲತಾ ಎಂ.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಪೊಲೀಸ್ ಇಲಾಖೆಯ ಪರಿವೀಕ್ಷಕ ಮುರಳೀಧರ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.ಹೊಸದಾಗಿ ಆಯ್ಕೆಯಾದ ಶಾಲಾ ಮಂತ್ರಿಮಂಡಲದ ಸದಸ್ಯರಿಗೆ ಪ್ರಮಾಣ ವಚನವನ್ನು ವಾಚಿಸಿದರು.

ಶಾಲಾ ಮಂತ್ರಿಮಂಡಲವನ್ನು ಉದ್ಘಾಟಿಸಿದ ಪೊಲೀಸ್ ಪರಿವೀಕ್ಷಕ ಮುರಳಿಧರ್ ರವರು ಮಾತನಾಡಿ, ಎಸ್.ಡಿ.ಎಂ ಸಂಸ್ಥೆಯು ರಾಜ್ಯದಲ್ಲೇ ಪ್ರಸಿದ್ಧ ಸಂಸ್ಥೆಯಾಗಿದೆ.ಸಂಸ್ಥೆಯ ಗೌರವವನ್ನು ಉಳಿಸುವಂತಹ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು, ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಸಂಸ್ಥೆಯಿಂದ ದೊರೆಯುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಹಾಗೆ ತಮ್ಮ ಜ್ಞಾನ ಭಂಡಾರ ವನ್ನು ಹೆಚ್ಚಿಸಿಕೊಳ್ಳಬೇಕು. ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸಂಸ್ಥೆ ಇನ್ನಷ್ಟು ಹೆಸರು ಗಳಿಸುವಂತಾಗಲಿ ಎಂದು ಶುಭ ಹಾರೈಸಿದರು.

ವಿದ್ಯಾರ್ಥಿ ನಾಯಕನಾಗಿ 10ನೇ ತರಗತಿಯ ಆಯುಷ್ ಕೆ, ಉಪನಾಯಕನಾಗಿ 9ನೇ ತರಗತಿಯ ಜಯದೀಪ್, ಶಿಕ್ಷಣ ಮಂತ್ರಿಯಾಗಿ 8ನೇ ತರಗತಿಯ ಸುಪ್ರೀತ್, ಕ್ರೀಡಾ ಮಂತ್ರಿಯಾಗಿ 8ನೇ ತರಗತಿಯ ಸಮ್ಯಕ್, ಆರೋಗ್ಯ ಮತ್ತು ಶಿಸ್ತು ಮಂತ್ರಿಯಾಗಿ 10ನೇ ತರಗತಿಯ ಸ್ವಿತಾ ಜೈನ್, ಸಾಂಸ್ಕೃತಿಕ ಮಂತ್ರಿಯಾಗಿ 8ನೇ ತರಗತಿಯ ಭೂಮಿಕಾ, ಮಾನವ ಸಂಪನ್ಮೂಲ ಮಂತ್ರಿಯಾಗಿ 9ನೇ ತರಗತಿಯ ಸುವೀನ್ ಆಯ್ಕೆಯಾದರು.

ಚಾರಿತ್ರ ಹತ್ತನೇ ತರಗತಿ ನಿರೂಪಿಸಿ, ಆರನೇ ತರಗತಿಯ ಸ್ತವ್ಯ ರಾಜೇಶ್ ಶೆಟ್ಟಿ ಸ್ವಾಗತಿಸಿ, ಎಂಟನೇ ತರಗತಿಯ ದೀಪ್ತ ವಂದಿಸಿದರು.ಶಾಲಾ ಶಿಕ್ಷಕ ವೃಂದದವರು ಸಹಕರಿಸಿದರು.

p>

LEAVE A REPLY

Please enter your comment!
Please enter your name here