ಕರಾಟೆಯಲ್ಲಿ ಬುರೂಜ್ ಶಾಲಾ ವಿದ್ಯಾರ್ಥಿಗಳಿಗೆ “ನೊಬೆಲ್ ವರ್ಲ್ಡ್ ರೆಕಾರ್ಡ್” ಪ್ರಶಸ್ತಿ

0

ಪುಂಜಾಲಕಟ್ಟೆ: ಇಲ್ಲಿನ ಬುರೂಜ್ ಇಂಗ್ಲಿಷ್ ಮೀಡಿಯಂ ಪ್ರೌಡಶಾಲೆ ಇದರ 17 ವಿದ್ಯಾರ್ಥಿಗಳು ಸೋರಿನ್ ರಿಯೂ ಕರಾಟೆ ಅಸೋಸಿಯೇಷನ್ ಮೂಡಬಿದ್ರೆ ಆಯೋಜಿಸಿದ್ದ, ಒಂದು ನಿಮಿಷದಲ್ಲಿ 250 ಪಂಚ್ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ, ನೊಬೆಲ್ ವರ್ಲ್ಡ್ ರೆಕಾರ್ಡ್ ಪ್ರಮಾಣ ಪತ್ರ ಹಾಗೂ ಚಿನ್ನದ ಪದಕ ಮತ್ತು ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಶೇಖ್ ಮೊಹಮ್ಮದ್ ದಾನಿಶ್, ಮೊಹಮ್ಮದ್ ಪವಾಝ್, ಮೊಹಮ್ಮದ್ ತಬ್ರೇಝ್, ಮೊಹಮ್ಮದ್ ಇನಾಫ್, ಮುಹಮ್ಮದ್ ರಿಯಾನ್, ಅಫ್ರಾ ರಿಂಷಾ, ಮಶ್ಕೂರ ಹನಾ, ಸ್ಪೂರ್ತಿ ಎಂ.ಜಾದರ್, ರಿಯಾನ ಫಾತಿಮಾ, ಸಹನಾ ಶಂಶುನ್, ಪ್ರಣೀತ್ ಜೆ ಶೆಟ್ಟಿ, ಆಯಿಷಾ ಮಲೀಹಾ, ಸ್ಪೂರ್ತಿ, ಫಾತಿಮಾ ಅನೀಷ ಪಿ., ಭವಿಷ್ ಇವರುಗಳು ಭಾಗವಹಿಸಿದ್ದರು.

ಕರಾಟೆ ಚಾಂಪಿಯನ್, ಶಿಕ್ಷಕರಾದ ನದೀಮ್ ಹಾಗೂ ಸರ್ಫಾಝ್ ಮಕ್ಕಳಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here