ಬೆಳ್ತಂಗಡಿ: ಹೋಲಿ ರಿಡೀಮರ್ ಚರ್ಚ್ ನಲ್ಲಿ ಜಲಬಂಧನ-2024 ಕಾರ್ಯಕ್ರಮ

0

ಬೆಳ್ತಂಗಡಿ: ಹೋಲಿ ರಿಡೀಮರ್ ಚರ್ಚ್, ಬೆಳ್ತಂಗಡಿ ಭಾರತೀಯ ಕಥೋಲಿಕ್ ಯುವ ಸಂಚಲನ ಘಟಕ, ಮಂಗಳೂರು ಪರಿಸರ ಆಯೋಗ ಧರ್ಮಪ್ರಾಂತ್ಯ ಮತ್ತು ಬೆಳ್ತಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಇವುಗಳ ಜಂಟಿ ಆಶ್ರಯದಲ್ಲಿ ಜಲಬಂಧನ-2024 ರಕ್ಷಿಸಿ ಜಲ-ಉಳಿಸಿ ಜೀವ ಸಂಕುಲ ಕಾರ್ಯಕ್ರಮವು ಜೂ.16ರಂದು ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ನಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹೋಲಿ ರಿಡೀಮರ್ ಚರ್ಚ್ ನ ಧರ್ಮಗುರು ಫಾ.ವಾಲ್ಟರ್ ಡಿಮೆಲ್ಲೋ, ಎಸ್.ಕೆ.ಡಿ.ಆರ್.ಡಿ.ಪಿ ಯೋಜನಾಧಿಕಾರಿ ಸುರೇಂದ್ರ ಕುಮಾರ್, ತಾಲೂಕು ಕೃಷಿ ಅಧಿಕಾರಿ ರಾಮ್ ಕುಮಾರ್, ಸೆಕ್ರೆಟರಿ ಗಿಲ್ಬರ್ಟ್ ಪಿಂಟೋ, ಸಿರಿ ಡಿಜಿಎಂ ವಿನ್ಸೆಂಟ್ ಲೋಬೋ, ಐಸಿವೈಎಂ ಆ್ಯನಿಮೇಟರ್ ಗಳಾದ ವಿಲ್ಸನ್ ಮೋನಿಸ್, ಫ್ಲೇವಿಯಾ ಪೌಲ್, ಆನ್ಸೆಲ್ಮ ಡಿ’ಸೋಜಾ, ಅಜಯ್ ರೋಡ್ರಿಗಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here