ಅಳದಂಗಡಿ: ತಾಯಿ- ತಂದೆ ಗುರುಗಳನ್ನು ನಾವು ಜೀವನ ಪರ್ಯಂತ ನೆನಪಿನಲ್ಲಿಟ್ಟುಕೊಳ್ಳಬೇಕು. ವಿದ್ಯೆಯಿಂದ ವಿನಯವಂತರಾಗೋಣ. ರಾಷ್ಟ್ರಹಿತದ ಕಾರ್ಯಕ್ಕೆ ನೆರವಾಗೋಣ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು.
ಸೂಳಬೆಟ್ಟು ಸ.ಕಿ.ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಹಾಗೂ ಅಂಗನವಾಡಿ ಪುಟಾಣಿಗಳಿಗೆ ರೋಟರಿ ಕ್ಲಬ್ ಸಹಯೋಗದಲ್ಲಿ ಡೋಂಗ್ರೆ ಕುಟುಂಬಸ್ಥರು ಕೊಡಮಾಡುವ 16ನೇ ವರ್ಷದ ಉಚಿತ ಪುಸ್ತಕಗಳ ಹಾಗೂ ಶೈಕ್ಷಣಿಕ ಪರಿಕರಗಳನ್ನು ಜೂ.14ರಂದು ವಿತರಿಸಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪ್ರಮೋದ ಪೂಜಾರಿ ವಹಿಸಿದ್ದರು.
ಪುಸ್ತಕಗಳ ದಾನಿಗಳಾದ ದಂತ ವೈದ್ಯ ಡಾl ಶಶಿಧರ ಡೋಂಗ್ರೆ, ಗ್ರಾ.ಪಂ.ಮಾಜಿ ಸದಸ್ಯ ವಿಶ್ವನಾಥ ಡೋಂಗ್ರೆ, ಡಾl ಸುಷ್ಮಾ ಡೋಂಗ್ರೆ, ಜ್ಯೋತಿ ಪ್ರತಾಪಸಿಂಹ ನಾಯಕ್, ಅಳದಂಗಡಿ ಗ್ರಾ.ಪಂ. ಸದಸ್ಯ ಪ್ರವೀಣ, ಅಂಗನವಾಡಿ ಕಾರ್ಯಕರ್ತೆ ಶಕುಂತಲಾ ಉಪಸ್ಥಿತರಿದ್ದರು.
ಡಾl ಡೋಂಗ್ರೆಯವರು ಅಕ್ಷರ ದಾಸೋಹಕ್ಕೆ 16 ಲೀ.ಸಾಮರ್ಥ್ಯದ ಕುಕ್ಕರ್‌ನ್ನು ಕೊಡುಗೆಯಾಗಿಯೂ ನೀಡಿದರು. ನಾಯಕ್ ಅವರು ಶಾಲಾಭಿವೃದ್ಧಿಗೆ ರೂ.5,000 ದೇಣಿಗೆ ನೀಡಿದರು. ಶಾಲಾ ಹಳೆ ವಿದ್ಯಾರ್ಥಿ ಕೃಷ್ಣ ಆಠವಳೆ ಅವರು ಈ ಬಾರಿಯ ಎಸ್.ಎಸ್.ಎಲ್.ಸಿ.ಯಲ್ಲಿ ಉನ್ನತ ಶ್ರೇಣಿಯನ್ನು ಪಡೆದಿರುವುದಕ್ಕೆ ಪುರಸ್ಕರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಲೀನಾ ಮೋರಾಸ್ ಸ್ವಾಗತಿಸಿ, ವಂದಿಸಿದರು. ದೀಪಕ ಆಠವಳೆ ಕಾರ್ಯಕ್ರಮ ನಿರ್ವಹಿಸಿದರು.