ಉಜಿರೆ: ಮಂಗಳೂರು ವಿಶ್ವವಿದ್ಯಾನಿಲಯ ಕಳೆದ ಫೆಬ್ರವರಿ 2023ರಲ್ಲಿ ನಡೆಸಿದ ಬಿ.ಎಡ್ ಪರೀಕ್ಷೆಯಲ್ಲಿ ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿ ತೇಜಸ್ವಿ ಕೆ, ಶೇ. 89.38 ಅಂಕಗಳನ್ನು ಪಡೆದು 4ನೇ ರ‍್ಯಾಂಕ್‌ನ್ನು ಪಡೆದಿರುತ್ತಾರೆ.
ಪರೀಕ್ಷೆಗೆ ಹಾಜರಾದ ಎಲ್ಲಾ 49 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶೇ 100 ಫಲಿತಾಂಶವನ್ನು ದಾಖಲಿಸಿರುತ್ತಾರೆ.
ಹಾಗೆಯೇ ಫೆಬ್ರವರಿ 2024ರಲ್ಲಿ ನಡೆದ ಬಿ.ಎಡ್. ಪರೀಕ್ಷೆಯಲ್ಲಿ ಪ್ರಶಿಕ್ಷಣಾರ್ಥಿ ಭವ್ಯ ಡಿ ನಾಯಕ್, ಶೇ. 88.96, ಅಂಕಗಳನ್ನು ಪಡೆದು 3ನೇ ರ‍್ಯಾಂಕ್‌ನ್ನು, ಮಂಜುಶ್ರೀ ಕೆ ನಾಯ್ಕ, ಶೇ.88.50 ಅಂಕಗಳನ್ನು ಪಡೆದು 7ನೇ ರ‍್ಯಾಂಕ್‌ನ್ನು ಪಡೆದಿರುತ್ತಾರೆ. ಪರೀಕ್ಷೆಗೆ ಹಾಜರಾದ 40 ವಿದ್ಯಾರ್ಥಿಗಳಲ್ಲಿ ೩೫ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 05 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶೇ 100 ಫಲಿತಾಂಶವನ್ನು ದಾಖಲಿಸಿರುತ್ತಾರೆ.
ವಿದ್ಯಾರ್ಥಿಗಳನ್ನು, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರನ್ನು ಸಂಸ್ಥೆಯ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಕಾರ್ಯದರ್ಶಿಗಳಾದ ಡಿ.ಹರ್ಷೇಂದ್ರ ಕುಮಾರ್, ಡಾ.ಸತೀಶ್ಚಂದ್ರ ಎಸ್ ರವರು ಅಭಿನಂದಿಸಿರುತ್ತಾರೆ.