ಅರಿಕೆಗುಡ್ಡೆ: ವಿಶ್ವ ಪರಿಸರ ದಿನದ ಅಂಗವಾಗಿ ಅರಣ್ಯ ಇಲಾಖೆ ಸಹಯೋಗದಿಂದ ಗಿಡ ನಾಟಿ ಕಾರ್ಯಕ್ರಮ

0

ಅರಸಿನಮಕ್ಕಿ: ಅರಿಕೆಗುಡ್ಡೆ ವನದುರ್ಗ ದೇವಳದ ಆವರಣದಲ್ಲಿ ಅರಣ್ಯ ಇಲಾಖೆ, ಹತ್ಯಡ್ಕ ಎ ಮತ್ತು ಬಿ ಒಕ್ಕೂಟ, ಶೌರ್ಯ ವಿಪತ್ತು ತಂಡದ ಸದಸ್ಯರು ಮತ್ತು ದೇವಾಲಯದ ಭಕ್ತರು ಸೇರಿ ವಿಶ್ವ ಪರಿಸರ ದಿನವನ್ನು ಗಿಡ ನೆಡುವ ಮೂಲಕ ಆಚರಿಸಿದರು.

ಈ ಸಂದರ್ಭದಲ್ಲಿ ದೇವಳದ ಟ್ರಸ್ಟ್ ನ ಅಧ್ಯಕ್ಷರಾದ ಪ್ರಕಾಶ್ ಪಿಲಿಕ್ಕಬೆ, ಟ್ರಸ್ಟ್ ನ ಕಾರ್ಯದರ್ಶಿ ಮುರಳಿಧರ್ ಶೆಟ್ಟಿಗಾರ್ ಸದಸ್ಯರಾದ ರೋಹಿತಾಶ್ವ ಶೆಟ್ಟಿಗಾರ್, ಗಣೇಶ್, ವಸಂತ್, ದೇವಕಿ, ಮಮತಾ, ಉಪ್ಪಿನಂಗಡಿ ಅರಣ್ಯ ವಿಭಾಗದ ಉಪವಲಯ ಅರಣ್ಯಧಿಕಾರಿ ಯತಿಂದ್ರ, ಗಾರ್ಡ್ ನಿಂಗಪ್ಪ ಅವಾರಿ, ಸಿದ್ದಿವಿನಾಯಕ ಭಜನಾ ಮಂಡಳಿ ಅಧ್ಯಕ್ಷ ಕೃಷ್ಣಪ್ಪ ಗೌಡ ಪಡ್ಡಾಯಿಬೆಟ್ಟು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ಶಶಿಕಲಾ, ಸೇವಾ ಪ್ರತಿನಿಧಿಗಳಾದ ಯಮುನಾ, ರೂಪ, ಒಕ್ಕೂಟದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ, ವಿಠಲ್ ಅಡಪಾ, ಸುನಂದಾ ಟಿ ಮತ್ತು ಶೌರ್ಯ ವಿಪತ್ತು ತಂಡದಿಂದ ಅವಿನಾಶ್ ಭಿಡೆ, ಕುಶಾಲಪ್ಪ ಗೌಡ, ಸೋಮಶೇಖರ್ ಗೌಡ,ಕಿರಣ್, ರಮೇಶ್, ಸ್ನೇಕ್ ಸುರೇಶ್, ಹರೀಶ್ ವಳಗುಡ್ಡೆ ಉಪಸ್ಥಿತರಿದ್ದು ವನಮಹೋತ್ಸವ ಕಾರ್ಯಕ್ರಮ ನಡೆಸಿಕೊಟ್ಟರು.

ಮುರುಳಿಧರ್ ಶೆಟ್ಟಿಗಾರ್ ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.

p>

LEAVE A REPLY

Please enter your comment!
Please enter your name here