ಲಾಯಿಲ: ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಶಾಲಾ ಪರಿಸರ ಸಂಘ ಇವರು ಇದರ ನೇತೃತ್ವವನ್ನು ವಹಿಸಿದ್ದರು.ಪರಿಸರ ದಿನದ ಆಚರಣೆಯನ್ನು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು.
ಶಾಲಾ ನಾಯಕಿಯಾದ ಪ್ರಾಪ್ತಿ.ಎಂ.ರಾವ್ ಇವರು ಪರಿಸರ ದಿನಾಚರಣೆ ಹಾಗೂ ಅದರ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಯಪಡಿಸಿದಳು.
ಅಂತೆಯೇ ಮಕ್ಕಳಲ್ಲಿ ಪ್ರಕೃತಿಯ ಬಗ್ಗೆ ಕಾಳಜಿ ಹಾಗೂ ಮಕ್ಕಳಲ್ಲಿ ಪ್ರಕೃತಿಯ ಸಂರಕ್ಷಣೆಯಲ್ಲಿ ಅವರ ಪಾತ್ರವನ್ನು ತಿಳಿಯಪಡಿಸಲು ಅವರಿಗೆ ಬಿತ್ತಿ ಪತ್ರವನ್ನು ತಯಾರಿಸಿ ಅದರ ಪ್ರದರ್ಶನವನ್ನು ಅದೇ ಸಂದರ್ಭದಲ್ಲಿ ಮಾಡಲಾಗಿತ್ತು.
ನಂತರ ಶಾಲಾ ಆವರಣದಲ್ಲಿ ಶಾಲಾ ಮುಖ್ಯೋಪಾಧ್ಯಾಯನಿಯವರು ಹಾಗೂ ಮಕ್ಕಳು ಗಿಡ ನೆಟ್ಟು, ಸ್ವಚ್ಛತಾ ಕಾರ್ಯವನ್ನು ಮಾಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು.
ಪರಿಸರ ಸಂಘದ ಶಿಕ್ಷಕಿ ರೇಷ್ಮಾ ಕಾರ್ಯಕ್ರಮವನ್ನು ನಿರೂಪಿಸಿದರು.
p>