ಪುಂಜಾಲಕಟ್ಟೆ: ಸ.ಪ್ರ.ದ.ಕಾಲೇಜಿನಲ್ಲಿ ಎನ್.ಎಸ್.ಎಸ್ ನಿಂದ ವಿಶ್ವ ಪರಿಸರ ದಿನದ ಆಚರಣೆ

0

ಪುಂಜಾಲಕಟ್ಟೆ: ಇಲ್ಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕ-1 ಮತ್ತು 2 ಇದರ ಸಹಯೋಗದಿಂದ ಜೂ. 5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ರಾಷ್ಟ್ರೀಯ ಸೇವಾ ಯೋಜನೆಯ ಎಲ್ಲಾ ಸ್ವಯಂ ಸೇವಕರು ಮತ್ತು ಪದಾಧಿಕಾರಿಗಳು ಸೇರಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮಾಧವ ಎಂ. ಅವರು ಪರಿಸರ ದಿನದ ಮಹತ್ವವನ್ನು ತಿಳಿಯಪಡಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಪ್ರೊ. ಸಂತೋಷ್ ಪ್ರಭು , ಪ್ರೊ. ಚಿತ್ರಾ ಪಡಿಯಾರ್ ಮತ್ತು ಕಾಲೇಜಿನ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here