ಸಂತ ತೆರೇಸಾ ಪದವಿಪೂರ್ವ ಕಾಲೇಜಿನಲ್ಲಿ ಪ್ರಾರಂಭೋತ್ಸವ

0

ಬೆಳ್ತಂಗಡಿ: ಸಂತ ತೆರೇಸಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜು ಪ್ರಾರಂಭೋತ್ಸವವನ್ನು ಜೂ.05ರಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಪ್ರಾರ್ಥನಾ ವಿಧಿಯನ್ನು ಶಾಲಾ ಚಟುವಟಿಕೆಗಳ ಸಾಮಗ್ರಿಗಳನ್ನು ಪ್ರದರ್ಶಿಸುವ ಮುಖಾಂತರ ನೆರವೇರಿಸಲಾಯಿತು.

ವೇದಿಕೆಯಲ್ಲಿ ಸಂತ ತೆರೇಸಾ ಕಾಲೇಜಿನ ಸಂಯೋಜಕೀ ಭಗಿನಿ ತೆರೇಸಿಯಾ ಸೇರಾ, ಸಂತ ತೆರೇಸಾ ಕಾನ್ವೆಂಟಿನಾ ಮೇಲ್ವಿಚಾರಕಿ ಭಗಿನಿ ಜೆಸಿಂತಾ ಬರೆಟೋ, ವಿಜ್ಞಾನ ವಿಭಾಗದ ಮುಖ್ಯಸ್ಥ ಡಾಕ್ಟರ್ ಹೆರಾಲ್ಡ್ ಹಾಗೂ ಪ್ರಾಂಶುಪಾಲರಾದ ಭಗಿನಿ ಆರೋಗ್ಯರವರು ಉಪಸ್ಥಿತರಿದ್ದರು.

ಭಗಿನಿ ತೆರೆಸ್ಸಿಯಾ ಸೆರ ಹಾಗೂ ಜೆಸಿಂತಾ ಬರೆಟೋ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಶಾಲಾ ನಿಯಮಗಳ ಬಗ್ಗೆ ವಿವರಿಸಿದರು.ಉಪನ್ಯಾಸಕಿ ಝೀಟಾರವರ ನಿರೂಪಿಸಿ, ಉಪನ್ಯಾಸಕಿ ಸುನಿತಾ ಸ್ವಾಗತಿಸಿ, ಉಪನ್ಯಾಸಕ ಪ್ರದೀಪ್ ವಂದಿಸಿದರು.

LEAVE A REPLY

Please enter your comment!
Please enter your name here