ರೆಖ್ಯ ಗ್ರಾಮದ ರವೀಂದ್ರ ಅಪಘಾತದಲ್ಲಿ ಮೃತ್ಯು

0

ರೆಖ್ಯ: ಗ್ರಾಮದ ನಾಳಾಲು ನಿವಾಸಿ ಬೈಕ್ ಸವಾರ ರವೀಂದ್ರ ನಾಲಾಳು(48 ವರ್ಷ) ರೆಖ್ಯದಿಂದ ಉದನೆ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ನೇಳ್ಯಡ್ಕ ಪ್ರೌಢ ಶಾಲೆ ಸಮೀಪದ ರಾಷ್ಟ್ರೀಯ ಹೆದ್ದಾರಿ 75 ರ ಫ್ಲೈ ಓವರ್ ಬಳಿ ಈ ಅಪಘಾತ ಸಂಭವಿಸಿದ್ದು ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರು ಪತ್ನಿ ಚಂದ್ರಾವತಿ ಮಕ್ಕಳಾದ ಸುಬ್ರಮಣ್ಯ, ಹರ್ಷ, ಹರ್ಷಿತ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here