ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ- ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬ್ರಿಜೇಶ್ ಚೌಟರಿಗೆ 1,01,408, ಪದ್ಮರಾಜ್‌ರಿಗೆ 78,101 ನೋಟಾಕ್ಕೆ 7,691 ಮತ

0

ಬೆಳ್ತಂಗಡಿ: ಭಾರಿ ಕುತೂಹಲ ಕೆರಳಿಸಿದ್ದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಜಯ ಗಳಿಸಿದ್ದಾರೆ. ಅವರಿಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿಯವರಿಗಿಂದ ಅಧಿಕ ಮತ ಚಲಾವಣೆಯಾಗಿದೆ.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,89,288 ಮತದಾರರು ಮತ ಚಲಾಯಿಸಿದ್ದರು. ಈ ಪೈಕಿ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ 101408 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ 78101 ಮತ ಗಳಿಸಿದ್ದಾರೆ.ನೋಟಾಕ್ಕೆ ಬೆಳ್ತಂಗಡಿಯಲ್ಲಿ 7691 ಮತ ಚಲಾವಣೆಯಾಗಿದ್ದು, ಇದು ಜಿಲ್ಲೆಯಲ್ಲೇ ಗರಿಷ್ಠ. ಕಳೆದ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನೋಟಾಕ್ಕೆ 7380 ಮತ ಚಲಾವಣೆಯಾಗಿತ್ತು. ಆದರೆ ಈ ಬಾರಿ ಅದು ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಚಲಾವಣೆಯಾಗಿದೆ.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಪಡೆದ ಮತ ಎಷ್ಟು?:

* ಕ್ಯಾ.ಬ್ರಿಜೇಶ್ ಚೌಟ (ಬಿಜೆಪಿ) – 101408

* ಪದ್ಮರಾಜ್ ಆರ್. ಪೂಜಾರಿ (ಕಾಂಗ್ರೆಸ್) – 78101

* ಕಾಂತಪ್ಪ ಅಲಂಗಾರ್ (ಬಿಎಸ್‌ಪಿ) – 553

* ದುರ್ಗಾ ಪ್ರಸಾದ್ (ಕರುನಾಡ ಸೇವಕರ ಪಕ್ಷ) – 449

* ಸುಪ್ರೀತ್ ಕುಮಾರ್ ಪೂಜಾರಿ (ಪಕ್ಷೇತರ)- 343

* ಮ್ಯಾಕ್ಸಿಂ ಪಿಂಟೊ (ಪಕ್ಷೇತರ)- 284

* ಪ್ರಜಾಕೀಯ ಮನೋಹರ್ (ಯುಪಿಪಿ)- 160

* ದೀಪಕ್ ರಾಜೇಶ್ ಕುವೆಲ್ಲೊ (ಪಕ್ಷೇತರ)- 166

* ರಂಜಿನಿ ಎಂ. (ಕೆಆರ್.ಎಸ್.) – 133

* ನೋಟಾ – 7691

LEAVE A REPLY

Please enter your comment!
Please enter your name here