ನಿಡ್ಲೆ: ಸ.ಪ್ರೌ.ಶಾಲೆ ಶಿಕ್ಷಕಿ ಪ್ರಭಾ ಟಿ. ತಲೇಕಿ ನಿಧನ: ಪ್ರಭಾ ರವರ ಅಪೇಕ್ಷೆಯಂತೆ ಮಣಿಪಾಲ ಮೆಡಿಕಲ್ ಕಾಲೇಜಿಗೆ ಮೃತದೇಹ ದಾನ

0

ನಿಡ್ಲೆ: ತಲೇಕಿ ಪ್ರಭಾ ಟಿ.(48ವ) ರವರು ಮೇ.31ರಂದು ನಿಧನರಾದರು.

ಇವರು ಕಂಪ್ಯೂಟರ್ ಕೋರ್ಸ್ ಮಾಡಿದ್ದ ನಿಡ್ಲೆ ಸರಕಾರಿ ಪ್ರೌಢ ಶಾಲೆಯಲ್ಲಿ ಕಂಪ್ಯೂಟ‌ರ್ ಶಿಕ್ಷಕಿಯಾಗಿ 3 ವರ್ಷ ಸೇವೆ ಸಲ್ಲಿಸಿದ್ದರು. ಹೃದಯ ಸಂಬಂಧಿ ಕಾಯಿಲೆಗೆ ಮೂರು ವರ್ಷದ ಹಿಂದೆ ಅಂದರೆ ಕೊರೋನ ಸಂದರ್ಭದಲ್ಲಿ ನಡೆದ ಫೇಸ್ ಮೇಕ‌ರ್ ಅಪರೇಷನ್ ನಂತರ ಗುಣಮುಖರಾಗದೇ ಹೆಚ್ಚಾಗಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಇವರು ಮೇ 31ರಂದು ನಿಧನರಾದರು.

ಒಂದು ವರ್ಷದ ಹಿಂದೆ ದೇಹದಾನ ಮಾಡಬೇಕೆನ್ನುವ ತನ್ನ ಮನದ ಆಸೆಯನ್ನು ಸಂಬಂಧಿಕರಲ್ಲಿ ತಿಳಿಸಿ, ಮಣಿಪಾಲ ಮೆಡಿಕಲ್ ಕಾಲೇಜಿಗೆ ಬರೆದು ಕೊಟ್ಟಿದ್ದರು.

ಅಂತೆಯೇ ಮೃತದೇಹವನ್ನು ಮೆಡಿಕಲ್ ಕಾಲೇಜಿಗೆ ನೀಡಲಾಯಿತು. ಮೃತರು ಪತಿ ಜಗದೀಶ್ ರಾವ್, ಸಹೋದರ, ಸಹೋದರಿ, ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here