ಕಳೆಂಜ: ನಂದಗೋಕುಲ ಗೋ ಶಾಲೆಯ ದೀಪೋತ್ಸವಕ್ಕೆ ಧರ್ಮಸ್ಥಳದಿಂದ 5 ಲಕ್ಷ ದೇಣಿಗೆ ಹಸ್ತಾಂತರ

0

ಕಳೆಂಜ: ಶ್ರೀ ವಿವೇಕಾನಂದ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಕಳೆಂಜ ಗ್ರಾಮದ ಬಂಡೇರಿಯಲ್ಲಿ ನಡೆಸಲ್ಪಡುತ್ತಿರುವ ‘ನಂದಗೋಕುಲ’ ಗೋಶಾಲೆಯಲ್ಲಿ ನಡೆಯಲಿರುವ ‘ದೀಪೋತ್ಸವ’, ‘ಗೋನಂದಾರತಿ ಹಾಗೂ ಇದಕ್ಕೆ ಪೂರ್ವಭಾವಿಯಾಗಿ ನಡೆದ ‘ಗೋಗ್ರಾಸ ಹೊರೆಕಾಣಿಕೆ ಶೋಭಾಯಾತ್ರೆ’ ಯ ಕಾರ್ಯಕ್ರಮಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೀಡಿರುವ ರೂ. 5,00,000/- ಮೊತ್ತದ ಅನುದಾನದ ಡಿ.ಡಿ. ಯನ್ನು ಮೇ 25 ರಂದು ಶ್ರೀಕ್ಷೇತ್ರದ ಪರವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಟ್ರಸ್ಟ್‌ನ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಇಂಜಿನೀಯರ್ ಸುರೇಶ್, ಕಳೆಂಜ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಉಮೇಶ್, ಕಳೆಂಜ ಗ್ರಾಮದ ಸೇವಾ ಪ್ರತಿನಿಧಿ ಜನಾರ್ದನ್, ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್‌ನ ಅಧ್ಯಕ್ಷ ಡಾ| ಎಂ.ಎಂ. ದಯಾಕರ್, ಟ್ರಸ್ಟ್‌ನ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ, ನಂದಗೋಕುಲ ದೀಪೋತ್ಸವ ಸಂಚಾಲನಾ ಸಮಿತಿಯ ಪದಾಧಿಕಾರಿಗಳಾದ ರಮೇಶ್ ಪೂಜಾರಿ, ಕುಮಾರನಾಥ ಶೆಟ್ಟಿ ಕಲ್ಕಂಜ, ರಾಘವೇಂದ್ರ ಗೌಡ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here