

ಬೆಳ್ತಂಗಡಿ: ಬೆಳ್ತಂಗಡಿ ಯುವ ವಾಹಿನಿ ಘಟಕದಿಂದ ಬೆಳ್ತಂಗಡಿಯ ಜನಪ್ರಿಯ ಮಾಜಿ ಶಾಸಕ, ಬಿಲ್ಲವ ಸಮಾಜದ ಧೀಮಂತ ನಾಯಕ ಕೆ.ವಸಂತ ಬಂಗೇರ ರವರಿಗೆ ನುಡಿನಮನ ಕಾರ್ಯಕ್ರಮ ಮೇ 23ರಂದು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಸಭಾಂಗಣದಲ್ಲಿ ನಡೆಯಿತು.
ಘಟಕದ ಅಧ್ಯಕ್ಷ ಸದಾಶಿವ ಊರ ಅಧ್ಯಕ್ಷತೆಯನ್ನು ವಹಿಸಿದ್ದರು.
ಘಟಕದ ಮಾಜಿ ಅಧ್ಯಕ್ಷರು ಮಾತಾಡಿದರು ಘಟಕ ನಿರ್ದೇಶಕರು ಪದಾಧಿಕಾರಿಗಳು ಸಂಘಟನಾ ಕಾರ್ಯದರ್ಶಿ ಹಾಗೂ ಸದಸ್ಯರು ವಸಂತ ಬಂಗೇರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಕಾರ್ಯದರ್ಶಿ ಯಶೋಧರ ಮುಂಡಾಜೆ ವಂದಿಸಿದರು.