ಪತ್ರಿಕಾಗೋಷ್ಠಿ- ಶಾಸಕ ಹರೀಶ್ ಪೂಂಜ ಪೊಲೀಸರ ವಿಚಾರಣಾ ನೋಟಿಸ್ ಗೆ ಹೆದರಿದ ಪುಕ್ಕಲ: ರಕ್ಷಿತ್ ಶಿವರಾಮ್

0

ಬೆಳ್ತಂಗಡಿ: ಸರಕಾರಿ ಜಾಗದಲ್ಲಿ ಪರವಾನಿಗೆ ಇಲ್ಲದೆ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದು, ಅಲ್ಲದೆ ಅವರ ಪರವಾಗಿ ಪೊಲೀಸ್ ಠಾಣೆಗೆ ಹೋಗಿ ಪೊಲೀಸ್ ಅಧಿಕಾರಿಗಳಿಗೆ ಅವ್ಯಾಚ ಶಬ್ಧಗಳಿಂದ ನಿಂದಿಸಿರುವ ಹರೀಶ್ ಪೂಂಜ ವಿರುದ್ಧ ಕೇಸು ದಾಖಲಾಗಿದ್ದು, ನೀತಿ ಸಂಹಿತೆ ಇರುವಾಗ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಹಾಗೂ ಅವಮಾನ ಮಾಡಿರುವ ಶಾಸಕರ ವಿರುದ್ಧ ಪೊಲೀಸರು ವಿಚಾರಣೆಗಾಗಿ ಮೇ 22ರಂದು ವಿಚಾರಣ ನೋಟಿಸು ನೀಡಲು ಹೋಗಿದ್ದಾಗ, ಸ್ವತಃ ವಕೀಲರಾಗಿದ್ದ ಹರೀಶ್ ಪೂಂಜರೇ ಹೆದರಿ ಕಾರ್ಯಕರ್ತರನ್ನು ಹಾಗೂ ಜನಪ್ರತಿನಿದಿಗಳನ್ನು ದೂರವಾಣಿ ಮೂಲಕ ಕರೆಸಿ ದೊಡ್ಡ ಹೈಡ್ರಾಮ ಮಾಡಿದರು.ಇದರಿಂದ ಇವರು ಪುಕ್ಕಲ ಶಾಸಕ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮೇ 23ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ಪೊಲೀಸರು ಬಂದೋಬಸ್ತ್ ಮಾಡದೆ ಶಾಸಕರು ಭಯ ಪಟ್ಟಿದ್ದಾರೆ. ಬಳಿಕ ಸಂಸದ ನಳೀನ್ ಕುಮಾರ್ ಕಟೀಲ್ ಚರ್ಚೆ ನಡೆಸಿ, ಅವರನ್ನು ಪೊಲೀಸ್ ಜೀಪಿನಲ್ಲಿ ಕರೆಯದೆ ಅವರ ವಾಹನದಲ್ಲಿ ಬರುವಂತೆ ಮಾಡಿದರು.ಭಾಷಣದಲ್ಲಿ ಪೊಲೀಸರಿಗೆ ಕಾಲರ್ ಪಟ್ಟಿ ಹಿಡಿಯುತ್ತೇನೆ ಎಂದು ಹೇಳಿ ಪೊಲೀಸರ ಕಾಲಿಗೆ ಬೀಳುವ ಪರಿಸ್ಥಿತಿ ಬಂತು.ಶಾಸಕರಾಗಿ, ಜನಪ್ರತಿನಿಧಿಯಾದ ಇವರು ಜವಬ್ದಾರಿ ಸ್ಥಾನದಲ್ಲಿ ಇದ್ದ ಇವರು, ಅವ್ಯಾಚ ಶಬ್ಧಗಳನ್ನು ಬಳಸಿ, ಠಾಣೆಗೆ ಬೆಂಕಿ ಹಚ್ಚುತ್ತೇನೆ ಎಂದು ಹೇಳಿದ ಇವರಿಗೆ ಪೊಲೀಸರು ನೊಟೀಸು ನೀಡಲು ಬರುವಾಗ ಹೆದರುವ ಪರಿಸ್ಥಿತಿ ಬಂತು.

ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯುನ್ನತ ಶಾಸಕರಾಗಿದ್ದು, ತಾಲೂಕಿನ ಗೌರವವನ್ನು ಹೆಚ್ಚಿಸಿದ್ದರು. ಆದರೆ ಈ ಶಾಸಕರಿಗೆ ಕಿಂಚಿತ್ತು ಯೋಚನೆ ಇಲ್ಲದೆ ವರ್ತಿಸುತ್ತಿದ್ದಾರೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೆಶ್ ಕುಮಾರ್ ಗೌಡ, ಜಿ.ಪಂ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಶಾಫೀ, ಬ್ಲಾಕ್ ಕಾಂಗ್ರೆಸ್ ಎಸ್ ಸಿ ಘಟಕದ ಅಧ್ಯಕ್ಷ ನಾಗರಾಜ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here