ಬೆಳ್ತಂಗಡಿ: ಮೇ.27ರಂದು ಕಿನ್ಯಮ್ಮ ಯಾನೆ ಗುಣವತಿ ಆಮ್ಮ ಸಭಾಂಗಣದಲ್ಲಿ ವಸಂತ ಬಂಗೇರರ ಸಾವಿರದ ನುಡಿ ನಮನಗಳ ಕಾರ್ಯಕ್ರಮ

0

ಬೆಳ್ತಂಗಡಿ: ಮೇ.27ರಂದು ಕಿನ್ಯಮ್ಮ ಯಾನೆ ಗುಣವತಿ ಆಮ್ಮಸಭಾಂಗಣದಿಲ್ಲಿ ವಸಂತ ಬಂಗೇರರ ಸಾವಿರದ ನುಡಿ ನಮನಗಳ ಕಾರ್ಯಕ್ರಮ ವಸಂತ ಬಂಗೇರರ ಸಾವಿರದ ನುಡಿ ನಮನಗಳು ಕಿನ್ಯಮ್ಮ ಯಾನೆ ಗುಣವತಿ ಆಮ್ಮಸಭಾಂಗಣ ಜೈನ್‌ಪೇಟೆ, ಬೆಳ್ತಂಗಡಿಯಲ್ಲಿ 27 ತಾರೀಕು ರಂದು ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾ‌ರ್,ವಿಧಾನ ಸಭೆಯ ಸ್ಪೀಕರ್ ಯುಟಿ ಖಾದರ್,ದಿಕ್ಕೂಚಿ ಭಾಷಣಗರಾಗಿ ಮಾಜಿ ಸ್ಪೀಕರ್ ರಮೇಶ್ ಭಾಷಣ ಮಾಡಲಿದ್ದು , ಸಚಿವರುಗಳು ಈ ಕಾರ್ಯಮದಲ್ಲಿ ಭಾಗವಹಿಸಲಿದ್ದಾರೆ.

ಬಂಗೇರರ ಹಿತೈಷಿಗಳು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಎಂದು ಬೆಳ್ತಂಗಡಿಯ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿ ಅಧ್ಯಕ್ಷರಾದ ಸತೀಶ್.ಕೆ ಬಂಗೇರ ಕಾಶಿಪಟ್ಟ ಮೇ 20ರಂದು ನಡೆದ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷ ರಕ್ಷಿತ್ ಶಿವರಾಂ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷ ಕೆ.ಎಮ್ ನಾಗೇಶ್ ಕುಮಾ‌ರ್ ಗೌಡ, ಧರಣೇಂದ್ರ ಕುಮಾರ್, ನಮಿತಾ ಭಂಡಾರಿ,ಶೇಖರ್ ಕುಕ್ಕೇಡಿ , ಜೈಶನ್ ಪಾಠೇರಿ, ವಂದನಾ ಭಂಡಾರಿ, ಸುದರ್ಶನ್ ಶೆಟ್ಟಿ, ಕರೀಮ್ ಗೇರುಕಟ್ಟೆ ಹಾಗೂ ನೇಮಿರಾಜ್ ಕಿಲ್ಲೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here