ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಮೊಹಲ್ಲಾ ಪ್ರತಿನಿಧಿ ಸಂಗಮ ಕಾರ್ಯಕ್ರಮ ಗೇರುಕಟ್ಟೆ ಸಹಕಾರಿ ಭವನದಲ್ಲಿ ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಬಹು ಇಸ್ಮಾಯಿಲ್ ಅಲ್ ಹಾದಿ ತಂಙಳ್ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಬೆಳ್ತಂಗಡಿ ತಾಲೂಕು ಸುನ್ನೀ ಸಂಯುಕ್ತ ಸಹಾಯಕ ಖಾಝಿ ಬಹು ಸಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಿದರು.ಮಾತನಾಡಿ ಖಾಝಿ ತೀರ್ಮಾನ ವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಅಶ್ರಫ್ ಸಖಾಫಿ ಮೂಡಡ್ಕ ಮಾತನಾಡಿ ಇಸ್ಲಾಮಿ ತತ್ವಾದರ್ಶಗಳನ್ನು ವಿವರಿಸಿದರು.
ಬದ್ರುದ್ದೀನ್ ನಾಳ.ಕುಂಙಬ್ದುಲ್ಲ ದಾರಿಮಿ ಗೇರುಕಟ್ಟೆ, ಅಬ್ಬಾಸ್ ಬಟ್ಲಡ್ಕ, ಅಹ್ಮದ್ ಎಂ ಕೆ ಬೆಳ್ಮ, ವಝೀರ್, ಕಾಜೂರು ಜಮಾಅತ್ ಸಮಿತಿ ಅಧ್ಯಕ್ಷ ಇಬ್ರಾಹಿಂ, ಹಂಝ ಸೋಕಿಲ ತ್ವಾಹಿರ್ ಹಿಮಮಿ ಸಖಾಫಿ, ಕಾಸಿಂ ಪದ್ಮುಂಜ ಸೇರಿದಂತೆ ವಿವಿಧ ಜಮಾತಿನ ನೇತಾರರು ಉಪಸ್ಥಿತರಿದ್ದರು.
ಸಂಯುಕ್ತ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ರವರು ಮಾತನಾಡಿ ಸಮಾಜದಲ್ಲಿ ನಡೆಯುತ್ತಿರುವ ಅನಿಸ್ಲಾಮಿಕ ಕಾರ್ಯಕ್ರಮಗಳನ್ನು ತ್ವಜಿಸಿ ಇಸ್ಲಮಿನ ನೈತ ತತ್ವಾದರ್ಶಗಳನ್ನು ಜೀವನದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಗೇರುಕಟ್ಟೆ ಪರಪ್ಪಿನಲ್ಲಿ ನಿರ್ಮಾಣವಾಗುತ್ತಿರುವ ಖಾಝಿ ಭವನದ ಕೆಲಸ ಪೂರ್ತಿಗೊಳಿಸಲು ಜಮಾಅತ್ ನಾಯಕರು ಕೈಜೋಡಿಸಬೇಕು ಎಂದರು.
ಸಂಯುಕ್ತ ಜಮಾಅತ್ ಕಾರ್ಯದರ್ಶಿ ಅಬ್ದುರಝಾಖ್ ಸಖಾಫಿಯವರು ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು.