ಬೆಳ್ತಂಗಡಿ: ಮಚ್ಚಿನ ಗ್ರಾಮದ ಹಲವಾರು ಕಡೆಗಳಲ್ಲಿ ರಸ್ತೆಯಲ್ಲೇ ಮಳೆ ನೀರು ಹರಿಯುತ್ತಿದೆ.
ಕಳೆದ ಹಲವು ದಿನಗಳಿಂದ ಪೂರ್ವ ಮುಂಗಾರು ಸುರಿಯುತ್ತಿದ್ದು, ಮಚ್ಚಿನ ಗ್ರಾಮದ ಹಲವು ಕಡೆಗಳಲ್ಲಿ ಚರಂಡಿಯಲ್ಲಿ ಕಸ ಕಡ್ಡಿ ತುಂಬಿರುವುದರಿಂದ ರಸ್ತೆಯಲ್ಲೇ ಮಳೆ ನೀರು ಹರಿಯುತ್ತಿದೆ. ಬಳ್ಳಮಂಜ ಪಣಕಜೆ ಹೊಸ ರಸ್ತೆ ಬದಿಯಲ್ಲೂ ಇದೇ ಸಮಸ್ಯೆ ಇದೆ.
ರಸ್ತೆಯಲ್ಲಿ ನೀರು ನಿಲ್ಲುವುದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಚರಂಡಿಗಳ ಹೂಳು ತೆರವುಗೊಳಿಸಿದರಷ್ಟೇ ರಸ್ತೆಗಳು ಉಳಿಯಬಹುದು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಅಪಾಯಕಾರಿ ಮರಗಳ ತೆರವು ಕಾರ್ಯವೂ ನಡೆಯಬೇಕಿದೆ. ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳುವಂತೆ ಆಗ್ರಹ ಕೇಳಿಬಂದಿದೆ.
p>