ಬೆಳ್ತಂಗಡಿ: ವಕೀಲರ ಸಂಘದ ವತಿಯಿಂದ ವಕೀಲರ ಭವನದಲ್ಲಿ ಪ್ರಧಾನ ಹಿರಿಯ ನ್ಯಾಯಾಧಿಶ ದೇವರಾಜು ಹೆಚ್ ಎಂ ರವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಅಧ್ಯಕ್ಷತೆಯನ್ನು ವಸಂತ ಮರಕಡ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ ಸಂದೇಶ್ ಕೆ ಜೆ, ಹಿರಿಯ ವಕೀಲರ ಸಮಿತಿ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೊ, ಬೆಳ್ತಂಗಡಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ ಕೆ ಭಾಗವಹಿಸಿದ್ದರು.
ಬೆಳ್ತಂಗಡಿಯ ಹಿರಿಯ ನ್ಯಾಯವಾದಿ ಬಿ ಕೆ ಧನಂಜಯ ರಾವ್ ಸನ್ಮಾನಿತರ ಬಗ್ಗೆ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಕೀಲರ ಸಂಘದ ಉಪಾಧ್ಯಕ್ಷ ಅಶೋಕ್ ಕರಿಯನೆಲ, ಖಜಾಂಚಿ ಪ್ರಶಾಂತ್ ಎಂ, ಅಸ್ಮಾ, ಮತ್ತಿತರರು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಇತರ ಪದಾಧಿಕಾರಿಗಳು, ವಕೀಲರುಗಳು ಹಾಗೂ ನ್ಯಾಯಾಲಯದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ನವೀನ್ ಬಿ ಕೆ ಸ್ವಾಗತಿಸಿ, ಉಷಾ ಪ್ರಾರ್ಥಿಸಿ, ಪ್ರಶಾಂತ್ ಎಂ ಧನ್ಯವಾದಗೈದರು.
p>