


ಬೆಳ್ತಂಗಡಿ: ಮಾಜಿ ಶಾಸಕ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಆರಂಭಕ್ಕೆ ಮುಖ್ಯ ಕಾರಣ ಕರ್ತರು ನಿರ್ದೇಶಕರೂ ಆಗಿದ್ದ ಕೆ.ವಸಂತ ಬಂಗೇರರರಿಗೆ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ವತಿಯಿಂದ ಮೇ 15ರಂದು ಶ್ರೀ ಗುರುನಾರಾಯಣ ಸ್ವಾಮಿ ಸಂಕೀರ್ಣದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.


ಸಂಘದ ಅಧ್ಯಕ್ಷ ಪದ್ಮನಾಭಾ ಮಾನಿಂಜಾ ಮತ್ತು ಉಪಾಧ್ಯಕ್ಷ ಭಗೀರಥ ಜಿ. ನುಡಿ ನಮನ ಸಲ್ಲಿಸಿ ಗುರುದೇವ ವಿವಿದೋದ್ದೇಶ ಸಹಕಾರ ಸಂಘ ಮತ್ತು ಶ್ರೀ ಗುರುದೇವ ಕಾಲೇಜು ಬಂಗೇರರವರ ಪ್ರಾರಂಭವಾಗಲು ಮುಖ್ಯ ಕಾರಣಕರ್ತರಾಗಿದ್ದು ಇವರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಮತ್ತು ಸಮಾಜದ ಅಭಿವೃದ್ಧಿಗೆ ಕಾರಣವಾಗಿದೆ.ಅವರ ನಿಧನವು ಸಂಘಕ್ಕೆ ಹಾಗೂ ಸಮಾಜಕ್ಕೆ ತುಂಬಾ ನಷ್ಟವಾಗಿದೆ ಎಂದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ತುನಜಾ ಶೇಖರ್, ಕೆ.ಪಿ ದಿವಾಕರ್, ಡಾ.ರಾಜರಾಮ ಕೆ.ಬಿ, ಸಂಜಿವ ಪೂಜಾರಿ, ಧರ್ಣಪ್ಪ ಪುಜಾರಿ ಹೆಚ್, ಗಂಗಾಧರ್ ಮಿತ್ತಮಾರ್, ಜಗದೀಶ್ ಚಂದ್ರ ಡಿ.ಕೆ., ಚಂದ್ರಶೇಖರ, ಜಯವಿಕ್ರಮ್, ಧರಣೇಂದ್ರ ಕುಮಾರ್, ಆನಂದ ಪೂಜಾರಿ, ವಿಶೇಷಾಧಿಕಾರಿ ಎಂ.ಮೋನಪ್ಪ ಪೂಜಾರಿ ಕಂಡೆತ್ಯಾರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಕುಮಾರ್, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.









