ಉಜಿರೆ: ಜಗತ್ತು ಕಂಡ ಅಪ್ರತಿಮ ದಾದಿ( Nurse) Florence Nightingale ಅವರ ಜನ್ಮದಿನ ಮೇ 12ರನ್ನು ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.ಉಜಿರೆಯ ಬೆನಕ ಹೆಲ್ತ್ ಸೆಂಟರ್ ನಲ್ಲಿ ಪ್ರತಿ ವರ್ಷ ಇದನ್ನು ಆಚರಿಸಿಕೊಂಡು ಬರುತ್ತಿದ್ದು, ಈ ವರ್ಷ ಕೂಡ ಕೆಲವು ವಿಶೇಷತೆಗಳನ್ನು ಒಳಗೊಂಡಂತೆ ದಾದಿಯರ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆನಕ ಹೆಲ್ತ್ ಸೆಂಟರ್ ನ ವೈದ್ಯಕೀಯ ನಿರ್ದೇಶಕರಾದ ಡಾ|ಗೋಪಾಲಕೃಷ್ಣ.ಕೆ ರವರು ಮಾತನಾಡುತ್ತ ಒಂದು ಆಸ್ಪತ್ರೆ ಸರಿಯಾದ ರೀತಿಯಲ್ಲಿ ರೋಗಿಗಳಿಗೆ ಶುಶ್ರೂಷೆ ನೀಡಲು ದಾದಿಯರ ಕರ್ತವ್ಯ ಮಹತ್ವವಾದದ್ದು, ಅವರು ಆಸ್ಪತ್ರೆಯ ಹೃದಯವಿದ್ದಂತೆ.ನಮ್ಮ ಆಸ್ಪತ್ರೆಯು ಈ ಹಂತ ತಲುಪಲು ಇಲ್ಲಿ ಸೇವೆಸಲ್ಲಿಸುತ್ತಿರುವ ದಾದಿಯರ ಕರ್ತವ್ಯ ಶ್ಲಾಘನೀಯ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ 35 ವರ್ಷ ಸೇವೆಸಲ್ಲಿಸಿ ನಿವೃತ್ತರಾದ ಹಿರಿಯ ದಾದಿ ಫಿಲೋಮಿನಾರವರನ್ನು ಅವರು ನೀಡಿದ ಸೇವೆಯನ್ನು ಸ್ಮರಿಸಿ ಡಾ|ಗೋಪಾಲಕೃಷ್ಣ ಮತ್ತು ಡಾ| ಭಾರತಿ ದಂಪತಿಗಳು ಶಾಲುಹೊದಿಸಿ ಫಲಪುಷ್ಪ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು.
ಸಿಸ್ಟೆರ್ ಅಶ್ವಿನಿ.ಕೆ ಯವರು ಈ ದಿನದ ಮಹತ್ವ ಕುರಿತು ಮಾಹಿತಿ ನೀಡಿದರು. ಸಿಸ್ಟರ್ ಅನಿಲ ಬೆನ್ನಿ ಯವರು ಆಸ್ಪತ್ರೆಯ ಎಲ್ಲ ದಾದಿಯರಿಗೆ ಪ್ರತಿಜ್ಞಾವಿಧಿ ಬೋಧಿಸಿವರು. ಆಸ್ಪತ್ರೆಯ ಪಿ.ಅರ್.ಓ.ಎಸ್.ಜಿ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಡಾ| ಭಾರತಿ ಜಿ.ಕೆ ಯವರು ಧನ್ಯವಾದ ಸಮರ್ಪಿಸಿದರು. ಕೊನೆಯಲ್ಲಿ ಆಸ್ಪತ್ರೆಯ ದಾದಿಯರು ಮತ್ತು ಸಿಬ್ಬಂದಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.