ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ- “ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್” ಸಾಕ್ಷ್ಯ ಚಲನಚಿತ್ರಕ್ಕೆ ಪ್ರಶಸ್ತಿ

0

ಬೆಳ್ತಂಗಡಿ: ಪುತ್ತೂರಿನ ಯುವ ಸಂಶೋಧಕಿ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಹಳೆ ವಿದ್ಯಾರ್ಥಿನಿ ಪೂರ್ಣಿಮಾ ರವಿ ನಿರ್ದೇಶಿಸಿರುವ “ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್” ಸಾಕ್ಷ್ಯ ಚಲನಚಿತ್ರ ಪ್ರತಿಷ್ಠಿತ 14ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ -2024ರಲ್ಲಿ ವಿಶೇಷ ಪ್ರಶಸ್ತಿಗೆ ಭಾಜನವಾಗಿದೆ.

ಏ.30ರಂದು ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ದೇಶಕಿ ಪೂರ್ಣಿಮಾ ರವಿ ಹಾಗೂಸಾಕ್ಷ ಚಲನಚಿತ್ರ ಕಾರ್ಯಕಾರಿ ನಿರ್ಮಾಪಕ ರವಿ ನಾರಾಯಣ ಪ್ರಶಸ್ತಿ ಸ್ವೀಕರಿಸಿದರು. ವಿಶ್ವದಾದ್ಯಂತದಿಂದ ಸುಮಾರು 700 ಚಲನಚಿತ್ರಗಳು ಈ ಚಲನಚಿತ್ರೋತ್ಸವಕ್ಕೆ ನಾಮಕರಣಗೊಂಡಿದ್ದವು.

ಈ “ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್” ಸಾಕ್ಷ್ಯ ಚಲನಚಿತ್ರದಲ್ಲಿ ರಾಜ್ಯದ 40ಕ್ಕೂ ಹೆಚ್ಚು ದೇವದಾಸಿಯರ ಜೀವನದ ವ್ಯಥೆ, ಅವರ ಕನಸುಗಳು ಹಾಗೂ ಈ ಸಾಮಾಜಿಕ ಅನಿಷ್ಠ ಪದ್ಧತಿ ಸಮಾಜದಿಂದ ತೊಲಗಲು ಆಗಬೇಕಿರುವ ಪರಿವರ್ತನೆಗಳ ಬಗ್ಗೆ ಚರ್ಚಿಸಲಾಗಿದೆ.

ಚಲನಚಿತ್ರ ನಿರ್ದೇಶಕರಾದ ಅರ್ಮೇನಿಯಾದ ರೋಮನ್ ಮುಶೆಗ್ಯಾನ್, ಜಪಾನ್‌ನ ನವೋಕಿ ಮತ್ಸುಮುರಾ, ಸ್ಪೇನ್‌ನ ಫ್ರಾನ್ಸಿಸ್ಕೊ ಸ್ಯಾಂಚೆಜ್ ಪಲಾಝೋನ್, ವೆನೆಜುವೆಲಾ ರಾಯಭಾರ ಕಚೇರಿಯ ಸಲಹೆಗಾರ ಆಲ್ಫ್ರೆಡೋ ಕಾಲ್ಡೆರಾ, ಚೀನಾದ ರಾನ್ ಲಿ, ಅಮೆರಿಕಾದ ಜೇಕ್ ಬೈರ್ಡ್, ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಜಿ.ಎಲ್. ಭಾರದ್ವಾಜ್ ತೀರ್ಪುಗಾರರ ತಂಡದಲ್ಲಿದ್ದರು.

ಡಾ. ಡಿ.ಸಿ. ಸಿಂಗ್ ಸಮನ್ವಯಕಾರರಾಗಿದ್ದರು.ಪೂರ್ಣಿಮಾ ರವಿ ಅವರು ಮಂಗಳೂರು ವಿವಿ ಇಂಗ್ಲಿಷ್ ವಿಭಾಗದಲ್ಲಿ ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದು, ಪ್ರಸ್ತುತ ಪುತ್ತೂರಿನ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದಾರೆ.

ಈ ಸಾಕ್ಷ್ಯ ಚಲನಚಿತ್ರಕ್ಕೆ ಪೂರ್ಣಿಮಾ ರವಿ ಅವರೇ ಧ್ವನಿ, ಉಪಶೀರ್ಷಿಕೆ, ಚಿತ್ರಕಥೆ ಬರೆದಿದ್ದಾರೆ. ಚಂದ್ರಶೇಖರ ಹೆಗ್ಡೆ (ಸಂಗೀತ ನಿರ್ದೇಶಕ), ರಕ್ಷಿತ್ ರೈ (ಸಂಕಲನ), ನಿಹಾಲ್ ನೂಜಿಬೈಲ್ (ಡಿಒಪಿ), ಸುನೀತಾ ಪ್ರವೀಣ್ (ಗಾಯಕಿ), ಸ್ವರ್ಣಶ್ರೀ ಪಟ್ಟೆ (ಗೀತ ರಚನೆಕಾರ), ಪ್ರವೀಣ್ ವರ್ಣಕುಟೀರ (ಸೃಜನಾತ್ಮಕ ಸಲಹೆಗಾರ), ಅಲೋಕ್ ನೂಜಿಬೈಲು (ಸೃಜನಾತ್ಮಕ ಪಾಲುದಾರ ) ಮತ್ತು ರವಿ ನಾರಾಯಣ (ಕಾರ್ಯನಿರ್ವಾಹಕ ನಿರ್ಮಾಪಕ) ಚಿತ್ರ ತಂಡದ ಭಾಗವಾಗಿದ್ದಾರೆ.

p>

LEAVE A REPLY

Please enter your comment!
Please enter your name here