ಕೊಕ್ಕಡ: ಮಲಗಿದಲ್ಲೇ ಯುವಕ ನಿಧನ

0

ಕೊಕ್ಕಡ: ಕೊಕ್ಕಡ ಗ್ರಾಮದ ಡೆಂಜ ಸಮೀಪದ ಪೊಯ್ಯಲೆ ಎಂಬಲ್ಲಿ ಯುವಕನೋರ್ವ ಮಲಗಿದಲ್ಲೇ ಮೃತಪಟ್ಟ ಘಟನೆ ಏ.25ರಂದು ಮಧ್ಯಾಹ್ನ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಹರೀಶ್(35 ವ) ಎಂದು ಗುರುತಿಸಲಾಗಿದೆ.ಮೃತ ಹರೀಶ್ ಮತ್ತು ಆತನ ತಂದೆ ಜೋಮ ಎಂಬವರು ಮನೆಯಲ್ಲಿ ವಾಸವಾಗಿದ್ದು ತಾಯಿ ಈ ಹಿಂದೆ ನಿಧನ ಹೊಂದಿದ್ದರು.

ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತ ದೇಹವನ್ನು ಬೆಳ್ತಂಗಡಿಗೆ ಕೊಂಡೊಯ್ಯಲಾಗಿದೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here