ಉಜಿರೆ ಚಾರ್ಮಾಡಿ ರಸ್ತೆಯ ಬಳಿ ಅಪರಿಚಿತ ಗಂಡಸಿನ ಶವ ಪತ್ತೆ

0

ಉಜಿರೆ: ಎ.24ರಂದು ಮಧ್ಯಾಹ್ನ12-30 ಗಂಟೆಗೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಅಜಿತ್ ನಗರ ಕ್ರಾಸ್ ಭಾರತ್ ಅಟೋ ಕಾರ್ಸ್ ಬಳಿ ಸುಮಾರು 35-40 ವರ್ಷ ವಯಸ್ಸಿನ ಅಪರಿಚಿತ ಗಂಡಸು ಸ್ಥಳದಲ್ಲೇ ರಸ್ತೆಗೆ ಉರುಳಿ ಬಿದ್ದು ಸಾವನ್ನಪ್ಪಿದ್ದು ಘಟನೆ ನಡೆದಿದೆ.

ಸ್ಥಳೀಯರ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮಂಗಳೂರಿನ ವೆಲ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.

ಸದರಿ ಮೃತದೇಹದ ವಾರೀಸುದಾರರ ಪತ್ತೆಗೆ ಸಹಕರಿಸಲು ವಿನಂತಿ ಮಾಹಿತಿ ಇದ್ದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು.

LEAVE A REPLY

Please enter your comment!
Please enter your name here