ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕ ಮೇಷ ಜಾತ್ರೋತ್ಸವಕ್ಕೆ ಚಾಲನೆ

0

ಮಚ್ಚಿನ: ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಜರಗುವ ಬ್ರಹ್ಮ ಕಲಶ ವಾರ್ಷಿಕ ದಿನಾಚರಣೆ ಮತ್ತು ವಾರ್ಷಿಕ ಮೇಷ ಜಾತ್ರಾ ಮಹೋತ್ಸವವು ಏ.23ದಿಂದ ಮೇ.2ರವರೆಗೆ ಜರಗಲಿದೆ.

ಏ.23 ಪೂ.ಗಂ 9ರಿಂದ ಸೀಯಾಳಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆರಾತ್ರಿ ಗಂಟೆ 6.30ರಿಂದ ಧ್ವಜಾರೋಹಣ, ಮಹಾಪೂಜೆ, ಉತ್ಸವ, ವಸಂತ ಸೇವೆ ನಡೆಯಿತು.

ಏ. 24 ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ ಗಂಟೆ 7ರಿಂದ ಮಹಾಪೂಜೆ, ಉತ್ಸವಏ. 25ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂ. ಗಂಟೆ 4 ರಿಂದ ಶ್ರೀ ದೇವಳದಿಂದ ಭಂಡಾರ ಹೊರಟು ಪಿಲಿಚಾಮುಂಡಿ ದೈವದ ನೇಮ, ಸಂಜೆ ಗಂಟೆ 6.30ರಿಂದ ಮಹಾಪೂಜೆ, ಉತ್ಸವ, ಏ. 26 ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಸಾಯಂ. ಗಂಟೆ 6ರಿಂದ ಕೊಪ್ಪರಿಗೆ ಏರಿಸುವುದು, ಬಯ್ಯದ ಬಲಿ ಪ್ರಾರಂಭ, ವಸಂತ ಸೇವೆ, ಮಹಾಪೂಜೆ, ಏ.27 ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆರಾತ್ರಿ ಗಂಟೆ 7ರಿಂದ ಕೆರೆ ಆಯನ, ಮಹಾಪೂಜೆ.

ಏ.28 ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂ. ಗಂಟೆ 4ರಿಂದ ಉತ್ಸವ, ಮೂಡುಕಟ್ಟೆ ಸವಾರಿ, ವಸಂತ ಸೇವೆ, ಮಹಾಪೂಜೆ, ಏ. 29ಪೂರ್ವಾಹ್ನ ಗಂಟೆ 7ರಿಂದ ಬ್ರಹ್ಮಕಲಶ ದಿನಾಚರಣೆ ಪ್ರಯುಕ್ತ ಗಣಯಾಗ, ಏಕದಶಾರುದ್ರಾಬಿಷೇಕ, ಪವಮಾನಹೋಮ, ಆಶ್ಲೇಷ ಬಲಿ, ಶ್ರೀ ಅನಂತೇಶ್ವರ ಸ್ವಾಮಿಗೆ ವಿಶೇಷ ಕಲಶಾಭಿಷೇಕ, ಶ್ರೀ ಗಣಪತಿ ದೇವರಿಗೆ ಕಟಾಹ ಅಪೂಪ ನೈವೇದ್ಯ ಸಮರ್ಪಣೆ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಸಾಯಂ. ಗಂಟೆ 7ರಿಂದ ಚಂದ್ರಮಂಡಲೋತ್ಸವ ವಸಂತ ಸೇವೆ, ಮಹಾಪೂಜೆ.

ಏ. 30 ಪೂರ್ವಾಹ್ನ ಗಂಟೆ 7ರಿಂದ ದರ್ಶನ ಬಲಿ ಮಧ್ಯಾಹ್ನ 12ರಿಂದ ಮಹಾಪೂಜೆ, ಅನ್ನಸಂತರ್ಪಣೆ ಸಾಯಂ. ಗಂಟೆ 6ರಿಂದ ಮಹಾರಥೋತ್ಸವ, ಮಹಾಪೂಜೆ, ಶ್ರೀಭೂತ ಬಲಿ, ಮೇ 1ಪ್ರಾತಃಕಾಲ ಕವಾಟೋದ್ಘಾಟನೆ, ವಸಂತ ಸೇವೆ ಮಧ್ಯಾಹ್ನ 11ರಿಂದ ತುಲಾಭಾರ, ಮಹಾಪೂಜೆ, ಅನ್ನಸಂತರ್ಪಣೆ, ಸಾಯಂ. ಗಂಟೆ 4ರಿಂದ ಅವಬೃತ ರಾತ್ರಿ 8ರಿಂದ ಧ್ವಜಾವರೋಹಣ, ಮಹಾಪೂಜೆ.

ಮೇ 2 ಮಹಾಸಂಪ್ರೋಕ್ಷಣೆ, ತುಲಾಭಾರ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಆನುವಂಶಿಕ ಆಡಳಿತ ಮೊಕ್ತೇಸರ ಡಾ. ಹರ್ಷ ಸಂಪಿಗೆತ್ತಾಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here