ಧರ್ಮಸ್ಥಳ: ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಪ್ರತಿಬಾರಿ ತನು ಸ್ಪಂದಿಸದವರ ಮನ ಸ್ಪಂದಿಸುವ ಕಾರ್ಯಕ್ರಮ ತುಡಿತ ಎರಡು ವರ್ಷಗಳ ಹಿಂದೆ ಪ್ರಾರಂಭಗೊಂಡಿದ್ದು, ಸುಮಾರು ಕಡೆಗಳಲ್ಲಿ ಹಾಸಿಗೆ ಬಿಟ್ಟು ಮೇಲೇಳಲಾಗದ ಮಕ್ಕಳ ಹಾಗೂ ದೊಡ್ಡವರನ್ನು ಭೇಟಿ ಮಾಡಿ ಹಾಡು ಹರಟೆ ಮುಖಾಂತರ ಅವರನ್ನು ಖುಷಿಪಡಿಸಿ ಹಣ್ಣು ಹಂಪಲು ಹಾಗೂ ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆಯನ್ನು ತುಂಬಿ ಬರುವ ಕಾರ್ಯಕ್ರಮ. ಇದೀಗ ಈ ಬಾರಿ ಮೂರನೇ ವರ್ಷಕ್ಕೆ ಪಾದಾರ್ಪಣೆಗೊಂಡಿದ್ದು.
ಈ ಬಾರಿಯ ವಿಶೇಷ ಎಂದರೆ ಈ ಕಾರ್ಯಕ್ರಮವನ್ನು ದೂರದಿಂದಲೇ ವೀಕ್ಷಿಸಿರುವ ವಿದುಷಿ ಚಂದ್ರಿಕಾ ರಾಜಾರಾಮ್ ಈ ಕಾರ್ಯಕ್ರಮಕ್ಕೆ ಕೈ ಜೋಡಿಸಿದ್ದು.
ಹಾಗೂ ಅವರ ಪ್ರಾಯೋಜಕತ್ವದಲ್ಲಿ ಈಗಾಗಲೇ ಧರ್ಮಸ್ಥಳ, ಪಾಂಗಳ, ದೊಂಡಲೆ, ನಾರ್ಯ, ಕನ್ಯಾಡಿ ಇತ್ಯಾದಿ ಪ್ರದೇಶಗಳಲ್ಲಿ ಇರುವ ಅಂತಹ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಬೇಕಾದ ಪೂರಕ ವಸ್ತುಗಳನ್ನು ನೀಡಿ ಸಹಕರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ ವಿ, ಶಾಲಾ ಸಹ ಶಿಕ್ಷಕಿ ರಮಾರಾಜೇಶ್ ಹಾಗೂ ಬೆಳ್ತಂಗಡಿ ತಾಲೂಕಿನ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳಾಗಿರುವ ಶಿವಕುಮಾರ್ ಎಸ್ಎಂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.