ತರ್ಬೀಯತುಲ್ ಇಸ್ಲಾಂ ದಮ್ಮಾಂ ಕರ್ನಾಟಕ ಮದ್ರಸದ ಮಿಹ್ರಜಾನುಲ್ ಬಿದಾಯ ವರ್ಷಾರಂಭ ಅಧ್ಯಯನ ಶಿಬಿರ

0

ಬೆಳ್ತಂಗಡಿ: ಇಸ್ಲಾಮಿಕ್ ಸೆಂಟರ್ ಎಸ್. ಐ. ಸಿ ದಮ್ಮಾಂ ಕರ್ನಾಟಕದ ಅಡಿಯಲ್ಲಿ ನೂತನವಾಗಿ ಪ್ರಾರಂಭಗೊಂಡ ತರ್ಬೀಯತುಲ್ ಇಸ್ಲಾಂ ದಮ್ಮಾಂ ಕರ್ನಾಟಕ ಮದ್ರಸದ 2024-2025ನೇ ಸಾಲಿನ ಮಿಹ್ರಜಾನುಲ್ ಬಿದಾಯ ವರ್ಷಾರಂಭ ಅಧ್ಯಯನ ಶಿಬಿರ ಎ.21ರಂದು ಸಮಾರಂಭದ ರೂಪದಲ್ಲಿ ನಡೆಯಿತು.

ಈ ಸಂಜೆ ನಡೆದ ಕಾರ್ಯಕ್ರಮದಲ್ಲಿ ಪುಟಾಣಿ ಶೋ, ಶಿಕ್ಷಣ ರಕ್ಷಕ ಸಭೆ, ಪ್ರಾರ್ಥನಾ ಸಂಗಮ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಎಸ್ ಕೆ ಐ ಎಂ ವಿ ಬಿ ಅಂಗೀಕೃತ ಸಿಲೆಬಸ್‌ ಇಲ್ಲಿ ಅಳವಡಿಸಲಾಗಿದೆ ಮತ್ತು ಉತ್ತಮ ಶಿಕ್ಷಕರ ನೇತೃತ್ವದಲ್ಲಿ ಅಧ್ಯಾಯನ ನಡೆಸಲಾಗುತ್ತಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಝಾಕ್ ಮಂಡೆಕೋಲು ವಹಿಸಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಸವಾದ್ ಫೈಝಿ ಉಸ್ತಾದರು ಮಾಡಿದರು ಮನ್ಸೂರ್ ಹುದವಿ ಪ್ರಾಸ್ತಾವಿಕ ಭಾಷಣ ಮಾಡಿದರು ವಿಷಯ ಮಂಡನೆಯನ್ನು ಸಿನಾನ್ ಹುದವಿ ಅಲ್ ಇರ್ಶಾದಿ ಕುಪ್ಪೆಟ್ಟಿ ನಡೆಸಿದರು.

ಈ ಅಧ್ಯಯನ ಶಿಬಿರದಲ್ಲಿ ಮುಖ್ಯ ಅಧ್ಯಾಪಕರಾದ ಅಬ್ದುಲ್ ರಶೀದ್ ಫೈಝಿ ಪೋಳ್ಯ.ವಿದ್ಯಾರ್ಥಿಗಳಿಗೆ ತರಗತಿ ಕ್ಲಾಸ್ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶರೀಫ್ ಮೇನಾಳ ಸ್ವಾಗತಿಸಿ ಕಾರ್ಯಕ್ರಮದ ಸವಾದ್ ನೇರಲಕಟ್ಟೆ ಧನ್ಯವಾದ ಹೇಳಿದರು.ಕಾರ್ಯಕ್ರಮದಲ್ಲಿ ನೌಶಾದ್ ಪೋಳ್ಯ ಸುನೀರ್ ಕೂರ್ನಡ್ಕ ಬಶೀರ್ ಅಝ್ಹರಿ ಚಾರ್ಮಾಡಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಸೌದಿ ವಿಸಿಟಿಂಗ್ ಬರುವ ಫ್ಯಾಮಿಲಿಗಳಿಗೆ ಅಡ್ಮಿಶನ್ ಕೊಡಲಾಗುವುದು.ವಾರದ ಮೂರು ದಿನ ತರಗತಿ ನಡೆಸಲಾಗುತ್ತಿದೆ.

p>

LEAVE A REPLY

Please enter your comment!
Please enter your name here