ಉದ್ಯೋಗಾಧಾರಿತ ಅರೆ ವೈದ್ಯಕೀಯ ಕೋರ್ಸುಗಳ ಎರಡು ದಿನಗಳ ಬೃಹತ್ ಕಾರ್ಯಾಗಾರ ಮತ್ತು ಸಲಹಾ ಶಿಬಿರ

0

ಬೆಳ್ತಂಗಡಿ: ಮಂಗಳಾ ಸಮೂಹ ವಿದ್ಯಾ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಇದೇ ತಿಂಗಳ ದಿನಾಂಕ 20ನೇ ಶನಿವಾರ ಮತ್ತು 21ನೇ ಭಾನುವಾರ ಎರಡು ದಿನಗಳ ಉದ್ಯೋಗಾಧಾರಿತ ಕೋರ್ಸುಗಳ ಸಲಹೆ ಮತ್ತು ಅಭ್ಯರ್ಥಿಗಳ ದಾಖಲಾತಿ ಶಿಬಿರ ನಡೆಯಲಿದೆ.

ಈ ಶಿಬಿರದಲ್ಲಿ ವೈದ್ಯಕೀಯ ವಲಯದಲ್ಲಿ ಲಭ್ಯವಿರುವ ಉದ್ಯೋಗಾಧಾರಿತ ವಿವಿಧ ಕೋರ್ಸುಗಳ ಬಗ್ಗೆ ಮತ್ತು ಕೋರ್ಸುಗಳ ದಾಖಲಾತಿಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗದರ್ಶನವನ್ನು ಉಚಿತವಾಗಿ ಒದಗಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಉದ್ಯೋಗ ವಲಯಗಳ ಅತ್ಯಂತ ಬೇಡಿಕೆ ಇರುವ ನರ್ಸಿಂಗ್ ಕೋರ್ಸುಗಳು, ಆಸ್ಪತ್ರೆಗಳಲ್ಲಿ ಕೆಲಸವನ್ನು ಗಳಿಸಲು ಸಹಕಾರಿಯಾಗುವ ಲ್ಯಾಬ್ ಟೆಕ್ನಿಶಿಯನ್, ಅನಸ್ಥೆಶಿಯಾ ಟೆಕ್ನಿನಿತಿಯನ್, ಡಯಾಲಿಸಿಸ್ ಟೆಕ್ನಿಶಿಯನ್, ಆಷ್ಟೊ ಮೆಟ್ರಿ, ಫಿಸಿಯೋಥೆರಪಿ ಮುಂತಾದ ಸಾಧಾರಣ 23ಕ್ಕಿಂತಲೂ ಹೆಚ್ಚಿನ ಡಿಪ್ಲೋಮಾ, ಪದವಿ ಅಲ್ಲದೆ ಸ್ನಾತಕೋತ್ತರ ಶಿಕ್ಷಣದ ಅವಕಾಶಗಳ ಬಗ್ಗೆ ಸಮಗ್ರ ಮಾಹಿತಿಗಳನ್ನು ತಿಳಿಸಿಕೊಡಲಾಗುವುದು. ವಿವಿಧ ಕೋರ್ಸುಗಳ ವಿವಿಧ ಭಾಗಗಳ ವಿಷಯ ತಜ್ಞರನ್ನು ಭೇಟಿಯಾಗಿ ಸಲಹೆಗಳನ್ನು ಪಡೆಯುವ ಅವಕಾಶಗಳನ್ನು ಇಲ್ಲಿ ಒದಗಿಸಲಾಗಿದೆ.

ಈ ಶಿಬಿರದಲ್ಲಿ ವಿವಿಧ ಕೋರ್ಸುಗಳ ಬಗ್ಗೆ ಮಾತ್ರವಲ್ಲದೆ ಶೈಕ್ಷಣಿಕ ಸಾಲದ ಬಗ್ಗೆ, ವಿದ್ಯಾರ್ಥಿ ವೇತನಗಳ ಬಗ್ಗೆ, ಸರಕಾರದ ಸವಲತ್ತುಗಳ ಬಗ್ಗೆ ಮಾಹಿತಿಗಳನ್ನು ಪಡೆಯಬಹುದು. ಮಂಗಳ ಸಮೂಹ ಸಂಸ್ಥೆಯ ಕಾಲೇಜುಗಳಲ್ಲಿ ಅದೇ ದಿನ ತಮ್ಮ ದಾಖಲಾತಿಯನ್ನು ಖಚಿತಪಡಿಸಿದರೆ ವಿಶೇಷ ಶುಲ್ಕ ರಿಯಾಯಿತಿಯನ್ನು ಪಡೆಯುವ ಅವಕಾಶವಿರುತ್ತದೆ.

NAAC ಸಂಸ್ಥೆಯ ಮಾನ್ಯತೆಯನ್ನು ಕರ್ನಾಟಕದಲ್ಲಿ ಮೊದಲನೆಯದಾಗಿ ಪಡೆದ ಒಂದೇ ಕಾಲೇಜೆಂಬ ಮತ್ತು ರಾಷ್ಟ್ರದ 5ನೆಯ ಅಡ್ ಹೆಲ್ತ್ ಸಯನ್ಸಸ್ ಕಾಲೇಜೆಂಬ ಹೆಗ್ಗಳಿಕೆಯನ್ನು ಪಡೆದಿರುವ ಈ ಕಾಲೇಜಿನಿಂದ ಕಲಿತು ಹೊರಬಂದ ವಿದ್ಯಾರ್ಥಿಗಳಿಗೆ ಉದ್ಯೋಗ ಗಳಿಸಲು ಈ ಮಾನ್ಯತೆಯು ಹೆಚ್ಚಿನ ಸಹಕಾರಿಯಾಗುವುದು.

NAAC ಮಾನ್ಯತೆಯು ಕಾಲೇಜಿನ ಗುಣಮಟ್ಟದ ಮೇಲಿನ ಮಾನದಂಡವಾಗಿರುತ್ತದೆ ಎಂದು ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಡಾ.ಗಣಪತಿ ಪಿ ಮತ್ತು ಡಾ.ಅನಿತಾ ಜಿ.ಭಟ್‌ ರವರು ಜಂಟಿ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here