ಕುತ್ಲೂರು: ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಕುತ್ಲೂರು ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷರಾಗಿ ರೂಪೇಶ್ ಪೂಜಾರಿ ಕುತ್ಲೂರು, ಕಾರ್ಯದರ್ಶಿಯಾಗಿ ರಾಮೇಶ್ವರ ಆಚಾರ್ಯ ಕುತ್ಲೂರು ನೇಮಕ

0

ಕುತ್ಲೂರು: ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಕುತ್ಲೂರು ಇದರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆಯು ಎ.14ರಂದು ಕ್ಲಬ್ ನ ಅಧ್ಯಕ್ಷ ದೀಕ್ಷಿತ್ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.

ಕ್ಲಬ್ ನ ನೂತನ ಅಧ್ಯಕ್ಷರಾಗಿ ರೂಪೇಶ್ ಪೂಜಾರಿ ಕುತ್ಲೂರು, ಉಪಾಧ್ಯಕ್ಷರಾಗಿ ಅಶ್ವಿತ್ ದೇವಾಡಿಗ, ಕಾರ್ಯದರ್ಶಿಯಾಗಿ ರಾಮೇಶ್ವರ ಆಚಾರ್ಯ, ಕೋಶಾಧಿಕಾರಿಯಾಗಿ ರವಿಪ್ರಸಾದ್ ಗೋಕುಲ, ಜೊತೆ ಕಾರ್ಯದರ್ಶಿಯಾಗಿ ಸಂಕೇತ್ ದೇವಾಡಿಗ, ಕ್ರೀಡಾ ಸಂಚಾಲಕರಾಗಿ ರಂಜಿತ್ ಪೂಜಾರಿ ಮತ್ತು ಪ್ರವೀಣ್ ಅಲಂಬ , ವಿಧ್ಯಾರ್ಥಿ ಪರಿಷತ್ ನ ಸಂಚಾಲಕರಾಗಿ ಆಶೀಕ್ ಮತ್ತು ಕೀರ್ತಿಕ್ ದೇವಾಡಿಗ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಇದರ ಗೌರವ ಸಲಹೆಗಾರರಾದ ರಾಮ್ ಪ್ರಸಾದ್ ಎನ್ ಎಸ್, ಸುಜಿತ್ ದೇವಾಡಿಗ, ಸತೀಶ್ ಕುತ್ಲೂರು, ಮತ್ತಿತ್ತರು ಉಪಸ್ಥಿತರಿದ್ದರು, ಕ್ಲಬ್ ನ ಕಾರ್ಯದರ್ಶಿ ಅಶ್ವಿತ್ ದೇವಾಡಿಗ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here