

ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಯವರು ಚುನಾವಣಾ ಪ್ರಚಾರದ ಪ್ರಯುಕ್ತ ಎ.17ರಂದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಕ್ಕೆ ಆಗಮಿಸಲಿದ್ದು ಕಾರ್ಯಕ್ರಮದ ವಿವರ ಈ ಕೆಳಗಿನಂತಿದೆ.
ಬೆಳಿಗ್ಗೆ 7.30ಕ್ಕೆ ಹೊಸಂಗಡಿ ಪ್ರೆಂಡ್ಸ್ ಕ್ಲಬ್ ವಠಾರದಲ್ಲಿ ಬೆಳ್ತಂಗಡಿ ಕ್ಷೇತ್ರಕ್ಕೆ ಆಗಮನ, 8ಕ್ಕೆ ವೇಣೂರು ಮಹಾಲಿಂಗೇಶ್ವರ ದೇವಸ್ತಾನಕ್ಕೆ ಭೇಟಿ, 9.30ಕ್ಕೆ ನಾರಾವಿ ಸೂರ್ಯ ನಾರಾಯಣ ದೇವಸ್ಥಾನ, ನಾರಾವಿ ಜೈನ ಬಸದಿ ಮತ್ತು ನಾರಾವಿ ಚರ್ಚ್ ಭೇಟಿ, 10ಕ್ಕೆ ನಾರಾವಿಯಿಂದ ರೋಡ್ ಶೋ ಮೂಲಕ ಅಳದಂಗಡಿಗೆ ಆಗಮನ, 11ಕ್ಕೆ ಅಳದಂಗಡಿಯಲ್ಲಿ ಬಹಿರಂಗ ಚುನಾವಣಾ ಪ್ರಚಾರ ಸಭೆ ಮತ್ತು ಅಳದಂಗಡಿ ಅರಮನೆ ಭೇಟಿ, ಅಪರಾಹ್ನ 12.30ಕ್ಕೆ ಅಳದಂಗಡಿಯಿಂದ ಉಜಿರೆಗೆ ರೋಡ್ ಶೋ ಮೂಲಕ ಆಗಮನ. 1.25ಕ್ಕೆ ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನಕ್ಕೆ ಭೇಟಿ, 1.30ರಿಂದ 2.30ರ ವರೆಗೆ ಚುನಾವಣಾ ಪ್ರಚಾರದ ಬಗ್ಗೆ ಪಕ್ಷದ ಮುಖಂಡರೊಂದಿಗೆ ಚರ್ಚೆ, 3ಕ್ಕೆ ಕಕ್ಕಿಂಜೆಯಲ್ಲಿ ಬಹಿರಂಗ ಚುನಾವಣಾ ಪ್ರಚಾರ ಸಭೆ, ಸಂಜೆ 5ಕ್ಕೆ ಕೊಕ್ಕಡದಲ್ಲಿ ಬಹಿರಂಗ ಚುನಾವಣಾ ಪ್ರಚಾರ ಸಭೆ, 7.30ಕ್ಕೆ ತಣ್ಣೀರುಪಂಥ ಗ್ರಾಮದ ಕಲ್ಲೇರಿಯಲ್ಲಿ ಚುನವಣಾ ಪ್ರಚಾರದ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ (ನಗರ) ಅಧ್ಯಕ್ಷರುಗಳಾದ ಸತೀಶ್ ಬಂಗೇರ ಕಾಶಿಪಟ್ಣ ಹಾಗೂ ನಾಗೇಶ್ ಕುಮಾರ್ ಗೌಡ, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಮತ್ತು ಉಸ್ತುವಾರಿ ಪ್ರಚಾರ ಸಮಿತಿಯ ಧರಣೇಂದ್ರ ಕುಮಾರ್ ಹಾಗೂ ಶೇಖರ ಕುಕ್ಕೇಡಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.