ಬೆಳ್ತಂಗಡಿಯ ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಶುಭಾರಂಭ

0

ಬೆಳ್ತಂಗಡಿ: ಬೆಳ್ತಂಗಡಿಯ ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘವು ವೇತನ ಆಧಾರಿತ ಸಾಲ, ನಿವೇಶನ ಅಡಮಾನ ಸಾಲ, ವಾಹನ ಖರೀದಿ ಸಾಲ ಹಾಗೂ ಸರಕಾರಿ ನೌಕರರಿಗೆ ವೈದ್ಯಕೀಯ ವೆಚ್ಚ ಸಾಲವನ್ನು ಕನಿಷ್ಠ ಬಡ್ಡಿ ದರದಲ್ಲಿ ನೀಡುತ್ತಿದೆ. ನಿಶ್ಚಿತ ಠೇವಣಿಗೆ ಆಕರ್ಷಕ ಅಧಿಕ ಬಡ್ಡಿ ದರವನ್ನು ನೀಡುತ್ತಿದ್ದು, ಗ್ರಾಹಕರು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಸಹಕಾರಿ ಸಂಘ ತಿಳಿಸಿದೆ.

ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಸರಕಾರಿ ನೌಕರರಿಗೆ ಹಾಗೂ ಇತರರಿಗೆ ನಿಗದಿತ ಠೇವಣಿ, ಸಂಚಿತ ಠೇವಣಿ ಮತ್ತು ಉಳಿತಾಯ ಖಾತೆಗಳ ಮೂಲಕ ಠೇವಣಿ ಯೋಜನೆಗಳನ್ನು ಒದಗಿಸಲಾಗುತ್ತಿದೆ.ಜಮೀನು ಸಾಲ, ಅಡಮಾನ ಸಾಲ ಹಾಗೂ ಠೇವಣಿ ಆಧಾರದ ಸಾಲಗಳನ್ನು ನೀಡಲಾಗುತ್ತಿದೆ. ಈ ಯೋಜನೆಗಳಿಗೆ ಉತ್ತಮ ಬೆಂಬಲ ಸಿಗುತ್ತಿರುವುದರಿಂದ ಸಹಕಾರಿ ಸದಸ್ಯರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ನಿವೇಶನ ಅಡಮಾನ ಸಾಲ, 4 ಚಕ್ರ, 2 ಚಕ್ರ ವಾಹನ ಖರೀದಿಗೆ ಸಾಲ ಯೋಜನೆಗಳನ್ನು ಆರಂಭಿಸಲಾಗಿದೆ.

ಠೇವಣಿಗೆ ಆಕರ್ಷಕ ಬಡ್ಡಿ: ಫಿಕ್ಸೆಡ್ ಡಿಪಾಸಿಟ್ ಇಡುವವರಿಗೆ ಆಕರ್ಷಕ ಬಡ್ಡಿ ದರ ನೀಡಲಾಗುತ್ತಿದೆ. 1ರಿಂದ 3 ತಿಂಗಳ ಅವಧಿಯ ಠೇವಣಿಗೆ ಶೇ.6.5, 1ರಿಂದ 6 ತಿಂಗಳವರೆಗೆ ಶೇ.7, 181ರಿಂದ 366 ದಿನಗಳವರೆಗೆ ಶೇ.8 ಹಾಗೂ 1ರಿಂದ 2 ವರ್ಷಗಳವರೆಗೆ ಶೇ.9 ಬಡ್ಡಿ ಕೊಡಲಾಗುವುದು. ವಿಧವೆಯರಿಗೆ, ವಿಕಲ ಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಶೇ.0.5 ಅಧಿಕ ಬಡ್ಡಿ ನೀಡಲಾಗುವುದು.

ಸರಳ ದಾಖಲಾತಿ, ಸಾಲ ಪ್ರಕ್ರಿಯೆಗೆ ಕನಿಷ್ಠ ಶುಲ್ಕ, ತ್ವರಿತಗತಿಯಲ್ಲಿ ಸಾಲ ಮಂಜೂರಾತಿ, ಅವಧಿಪೂರ್ವ ಮುಕ್ತಾಯದ ಸಾಲಕ್ಕೆ ಶುಲ್ಕವಿಲ್ಲ, ಸುಲಭ ಮಾಸಿಕ ಕಂತುಗಳು, ಠೇವಣಿಗಳ ಮೇಲೆ ಸಾಲ ಸೌಲಭ್ಯ ಈ ಸಹಕಾರಿ ಸಂಘದ ವಿಶೇಷತೆಯಾಗಿದೆ. ನಿತ್ಯನಿಧಿ ಠೇವಣಿ(ಪಿಗ್ಮಿ), ಮಾಸಿಕ ಠೇವಣಿ ಸೌಲಭ್ಯವಿದೆ.

ಸುವರ್ಣ ಆರ್ಕೇಡ್‌ಗೆ ಸ್ಥಳಾಂತರ: ಇದೀಗ ಸುವರ್ಣ ಆರ್ಕೇಡ್ ಕಟ್ಟಡಕ್ಕೆ ಎ.15ರಂದು ಸ್ಥಳಾಂತರಗೊಂಡು ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಪ್ರತಿಮಾ ಬಿ.ವಿ. ಅವರು ಸಹಕಾರಿ ಸಂಘದ ಅಧ್ಯಕ್ಷರಾದ ಡಾ.ಕೆ. ಜಯಕೀರ್ತಿ ಜೈನ್ ರವರ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಮಾಡಿದರು.

ಸಹಕಾರಿ ಸಂಘದಲ್ಲಿ ಇ- ಸ್ಟಾಂಪಿಂಗ್, ಕಲರ್ ಝರಾಕ್ಸ್, ಝರಾಕ್ಸ್, ಆಯುಷ್ಮಾನ್ ಹೆಲ್ತ್ ಕಾರ್ಡ್, ಪಹಣಿ ಪತ್ರ, ಎಲ್ಲಾ ಬಗೆಯ ಸ್ಟೇಷನರಿಗಳು ಮಿತ ದರದಲ್ಲಿ ದೊರೆಯುವ ಸೌಲಭ್ಯಗಳು ಇರುತ್ತದೆ. ಈ ಸಂದರ್ಭದಲ್ಲಿ ನಿರ್ದೇಶಕರಾದ ಪರಮೇಶ್ ಟಿ., ಚಂದ್ರಶೇಖರ್, ರತ್ನಾವತಿ, ಪ್ರಶಾಂತ ಕುಮಾರ್, ಹರಿ ಪ್ರಸಾದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವತ್ಸಲಾ ಜ್ಯೋತಿರಾಜ್, ಶಾಖಾ ವ್ಯವಸ್ಥಾಪಕ ಪಿ. ಅತಿಶಯ್ ಜೈನ್, ಮುಖ್ಯ ಪಶು ವೈದ್ಯಾಧಿಕಾರಿ ಡಾ.ರವಿ ಕುಮಾರ್, ಸಬ್ ರಿಜಿಸ್ಟ್ರಾರ್ ನಾಗರಾಜ್, ಸಿಬ್ಬಂದಿಗಳಾದ ವಿಶಾಲ, ನಿತಿನ್ ಹಾಗೂ ನಿತ್ಯನಿಧಿ ಠೇವಣಿ ಸಂಗ್ರಾಹಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ಸಲಹೆಗಾರ ವಸಂತ ಸುವರ್ಣ ರವರು ಸ್ವಾಗತಿಸಿ, ಉಪಾಧ್ಯಕ್ಷ ಚಿದಾನಂದ ಎಸ್. ಹೂಗಾರ್ ರವರು ವಂದಿಸಿದರು.

ವಿಶೇಷವಾಗಿ ಕಛೇರಿಗೆ ಬಂದ ಪ್ರತಿಯೊಬ್ಬ ಗ್ರಾಹಕರಿಗೆ ಪ್ರತಿದಿನ ಉಚಿತ ಕಾಫಿ ವ್ಯವಸ್ಥೆ ಇದೆ.

LEAVE A REPLY

Please enter your comment!
Please enter your name here