ಏ.15ರಿಂದ ವಿದ್ಯಾಮಾತಾ ಅಕಾಡೆಮಿಯಿಂದ ಪಿಯು ಮುಗಿಸಿದ ವಿದ್ಯಾರ್ಥಿಗಳಿಗೆ ಉಚಿತ ಕೌನ್ಸಿಲಿಂಗ್ ಹಾಗೂ 5 ಲಕ್ಷ ವಿದ್ಯಾರ್ಥಿವೇತನ

0

ಪುತ್ತೂರು: ಪಿಯು ಬಳಿಕ ಮುಂದಿನ ಆಯ್ಕೆ ಬಗ್ಗೆ ಗೊಂದಲ, ಚಿಂತೆಯಲ್ಲಿರುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಮತ್ತು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಂಪನಿಗಳಿಗೆ ನೇರ ಸಂದರ್ಶನವನ್ನು ಏರ್ಪಡಿಸುವಂತಹ ಉದ್ಯೋಗದಾತ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯು ಆಸಕ್ತ ವಿದ್ಯಾರ್ಥಿಗಳಿಗೆ ಉಚಿತ ಕೌನ್ಸೆಲಿಂಗ್ ಏರ್ಪಡಿಸಲಿದೆ.

ಏ.15 ರಿಂದ (ಇಂದಿನಿಂದ) 20 ರ ವರೆಗಿನ ಆರು ದಿನಗಳ ಕಾಲ ದಿನಂಪ್ರತಿ ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಸದ್ಯ ದ್ವಿತೀಯ ಪಿಯುಸಿ ಪಾಸಾಗಿರುವಂಥಹ, ಮುಂದೆನೆಂಬ ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನುರಿತ ಕೌನ್ಸಿಲರ್ ಗಳ ಮೂಲಕ ಉಚಿತ ಕೌನ್ಸಿಲಿಂಗ್ ನಡೆಯಲಿದೆ.

ಮೆಡಿಕಲ್ ಸೈನ್ಸ್, ಡೆಂಟಲ್ ಸೈನ್ಸ್, ಆಯುರ್ವೇದಿಕ್, ಹೋಮಿಯೋಪತಿ ಇಂಜಿನಿಯರಿಂಗ್, ನರ್ಸಿಂಗ್, ಫಾರ್ಮಸಿ, ಪ್ಯಾರಾಮೆಡಿಕಲ್, ಅಲೈಡ್ ಹೆಲ್ತ್ ಸೈನ್ಸ್, ಎವಿಯೇಷನ್, ಹೋಟೆಲ್ ಮ್ಯಾನೇಜ್ಮೆಂಟ್ , ಕಂಪ್ಯೂಟರ್ ಅಪ್ಲಿಕೇಶನ್, ಫ್ಯಾಶನ್ ಡಿಸೈನ್ ಹಾಗೂ ಇಂಟೀರಿಯರ್ ಡಿಸೈನ್ ಈ ರೀತಿ ಹಲವಾರು ಕ್ಷೇತ್ರದಲ್ಲಿ ಲಭ್ಯವಿರುವ ಉಪಯುಕ್ತ ಮತ್ತು ವಿಫುಲ ಉದ್ಯೋಗವಕಾಶಗಳು ಇರುವ ಕೋರ್ಸ್ ಗಳ ಬಗ್ಗೆ ನುರಿತ ತಜ್ಞರು ಕೌನ್ಸಿಲಿಂಗ್ ಮೂಲಕ ಪರಿಹಾರ ಸಿಗಲಿದ್ದು, ಸೇವೆಯು ಉಚಿತವಾಗಿರಲಿದೆ.

ಕೌನ್ಸಿಲಿಂಗ್ ನಲ್ಲಿ ಭಾಗವಹಿಸುವ ಮತ್ತು ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಒಟ್ಟು 5 ಲಕ್ಷ ರೂಪಾಯಿಗಳ ವಿದ್ಯಾರ್ಥಿ ವೇತನವೂ ವಿದ್ಯಾಮಾತಾ ಫೌಂಡೇಶನ್ ಮೂಲಕ ಸಿಗಲಿದೆ.

ಅಧಿಕ ಮಾಹಿತಿಗಾಗಿ: ವಿದ್ಯಾಮಾತಾ ಅಕಾಡೆಮಿ ಇದರ ಪುತ್ತೂರು ಕಛೇರಿ ಅಥವಾ ದೂರವಾಣಿ ಸಂಖ್ಯೆ- 9148935808 , 9620468869 ಸಂಪರ್ಕಿಸುವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here