ಬೆಳ್ತಂಗಡಿ ಗುರುದೇವ ಕಾಲೇಜು ಉತ್ತಮ ಸಾಧನೆ: 290ರಲ್ಲಿ 263 ಮಂದಿ ಉತ್ತೀರ್ಣ – ಶೇ.91

0

ಬೆಳ್ತಂಗಡಿ: ಇಲ್ಲಿನ ಗುರುದೇವ ಪದವಿಪೂರ್ವ ಕಾಲೇಜಿನ 290 ವಿದ್ಯಾರ್ಥಿಗಳ ಪೈಕಿ 263 ಮಂದಿ ಉತ್ತೀರ್ಣರಾಗಿದ್ದು, ಶೇ.91 ಫಲಿತಾಂಶ ದಾಖಲಾಗಿದೆ. 46 ಮಂದಿಗೆ ಡಿಸ್ಟಿಂಕ್ಷನ್, 165 ಮಂದಿಗೆ ಪ್ರಥಮ ಶ್ರೇಣಿ, 46 ಮಂದಿಗೆ ದ್ವಿತೀಯ ಶ್ರೇಣಿ ಹಾಗೂ 6 ಮಂದಿಗೆ ತೃತೀಯ ಶ್ರೇಣಿ ಅಂಕ ಲಭಿಸಿದೆ.

ವಿಜ್ಞಾನ ವಿಭಾಗದಲ್ಲಿ ಹಾಜರಾದ 95 ವಿದ್ಯಾರ್ಥಿಗಳಲ್ಲಿ 85 ಮಂದಿ (ಶೇ.90) ಉತ್ತೀರ್ಣರಾಗಿದ್ದು, 22 ಮಂದಿಗೆ ಡಿಸ್ಟಿಂಕ್ಷನ್, 55 ಪ್ರಥಮ ಶ್ರೇಣಿ, 8 ದ್ವಿತೀಯ ಶ್ರೇಣಿ ಅಂಕ ಪಡೆದಿದ್ದಾರೆ. ಚಂದನಾ ಮತ್ತು ಆಶಿಕ್ 568 ಸಮಾನ ಅಂಕಗಳೊಂದಿಗೆ ವಿಭಾಗದ ಟಾಪರ್ ಆಗಿದ್ದಾರೆ. ಸ್ವಸ್ತಿಕಾ 559, ಎ.ಜತೀಶ್ ಕೃಷ್ಣ 558 ಅಂಕ ಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 139 ಮಂದಿ ಪೈಕಿ 130 (ಶೇ.94) ಮಂದಿ ಉತ್ತೀರ್ಣರಾಗಿದ್ದಾರೆ. 21 ಮಂದಿ ಡಿಸ್ಟಿಂಕ್ಷನ್, 77 ಮಂದಿ ಪ್ರಥಮ ಶ್ರೇಣಿ, 29 ಮಂದಿ ದ್ವಿತೀಯ ಶ್ರೇಣಿ, ಮೂವರು ತೃತೀಯ ಶ್ರೇಣಿ ಪಡೆದುಕೊಂಡಿದ್ದಾರೆ. ಈ ವಿಭಾಗದ ಲೆನಿಶಾ ಕ್ರಾಸ್ತಾ 569 ಅಂಕಗಳೊಂದಿಗೆ ಕಾಲೇಜಿನ ಟಾಪರ್ ಆಗಿ ಹೊರಹೊಮ್ಮದ್ದಾರೆ.ಲೆಸ್ಟನ್ ರೋಡ್ರಿಗಸ್ 566, ಸುಚಿತ್ರಾ 565 ಅಂಕ ಗಳಿಸಿದ್ದಾರೆ.

ಕಲಾ ವಿಭಾಗದ 56 ಮಂದಿ ಪೈಕಿ 48 ಮಂದಿ (ಶೇ.86) ಉತ್ತೀರ್ಣರಾಗಿದ್ದಾರೆ. ಮೂವರಿಗೆ ಡಿಸ್ಟಿಂಕ್ಷನ್, 33 ವಿದ್ಯಾರ್ಥಿಗಳಿಗೆ ಪ್ರಥಮ ಶ್ರೇಣಿ, 9 ಮಂದಿಗೆ ದ್ವಿತೀಯ ಶ್ರೇಣಿ, ಮೂವರಿಗೆ ತೃತೀಯ ಶ್ರೇಣಿ ಅಂಕ ಬಂದಿದೆ. ಹಜ್ರತ್ ರೈಸಾ 567, ಸಂಶದ್ 558, ವೈಷ್ಣವಿ 543ಅಂಕ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here