ಸಿಎಂ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ: ಕಾನೂನು ಕ್ರಮಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

0

ಬೆಳ್ತಂಗಡಿ: ಸಾಮಾಜಿಕ ಜಾಲತಾಣಗಳ ಮುಖಾಂತರ ಸುಳ್ಳು ಸುದ್ದಿಗಳನ್ನು ಹರಡಿ ಸಮಾಜದಲ್ಲಿ ಶಾಂತಿ ಭಂಗ ಉಂಟು ಮಾಡಲು ಪ್ರಯತ್ನಿಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಕಾಂಗ್ರೆಸ್‌ ಪಕ್ಷದ ದ.ಕ ಜಿಲ್ಲಾ ಸಾಮಾಜಿಕ ಜಾಲಾತಾಣ ವಿಭಾಗದ ಪ್ರಧಾನ ಕಾರ್ಯದರ್ಶಿ ಗಣೇಶ್ ರವರು ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಎ.10ರಂದು ದೂರು ನೀಡಿದ್ದಾರೆ.

ಕಾಂಗ್ರೆಸ್‌ ಪಕ್ಷದ ದ.ಕ ಜಿಲ್ಲಾ ಸಾಮಾಜಿಕ ಜಾಲಾತಾಣ ವಿಭಾಗದ ಪ್ರಧಾನ ಕಾರ್ಯದರ್ಶಿ ಗಣೇಶ್ ನೀಡಿದ ದೂರಿನಲ್ಲಿ ಆರೋಪಿಗಳಾದ ವಸಂತ್ ಗಿಳಿಯಾರ್, ಜಯಂತ್ ಮತ್ತೀತರರು ಸಾಮಾಜಿಕ ಜಾಲಾತಾಣದಲ್ಲಿ ” ಹಿಂದೂಗಳ ಅಗತ್ಯ ನಮಗೆ ಬೇಡ ಮುಸ್ಲಿಂರ ಓಟು ಸಾಕು ಸಿದ್ದರಾಮಯ್ಯ ‘ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಲು ಬಯಸುತ್ತೇನೆ ಮುಸ್ಲಿಂರ ಓಲೈಕೆ ಕುರಿತು ಬಿಜೆಪಿಗರ ಟೀಕೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ’ ಎಂಬ ತಲೆಬರಹದಡಿ ಸುಳ್ಳು ಸುದ್ದಿಯನ್ನು ಹರಡಿದ್ದು ಯಾವುದೋ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸುದ್ದಿಯಂತೆ ಎಡಿಟ್ ಮಾಡಿ ಈ ಸುಳ್ಳು ಸುದ್ದಿಯನ್ನು ಹರಡಿದ್ದಾರೆ.

ಜಾತಿ ಧರ್ಮಗಳ ನಡುವೆ ವೈಷಮ್ಯ ಸೃಷ್ಟಿಸಿ ಸಮಾಜದಲ್ಲಿ ಶಾಂತಿಭಂಗ ಉಂಟುಮಾಡುವ ಸಮಾನ ಉದ್ದೇಶದಿಂದ ಈ ಸುಳ್ಳು ಸುದ್ದಿಯನ್ನು ಎಡಿಟ್ ಮಾಡಿ ಬಿತ್ತರಿಸಲಾಗಿರುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಕಾಠ್ಯ ಕ್ರಮದಲ್ಲಿ ಈ ರೀತಿ ಮಾತನಾಡಿರುವುದಿಲ್ಲ ಮತ್ತು ರಾಜ್ಯದ ಯಾವುದೇ ಪತ್ರಿಕಾ ಮಾಧ್ಯಮಾಗಳು ಇಂತಹ ವರದಿ ಮಾಡಿರುವುದಿಲ್ಲ ಹಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಾಯ್ಯನವರ ಘನತೆ ಗೌರವಕ್ಕೆ ಚ್ಯುತಿ ಬರುವಂತೆ ಹಾಗೂ ಧರ್ಮ ಧರ್ಮಗಳ ನಡುವೆ ವೈಸಮ್ಯ ಸೃಷ್ಟಿಸಿ ಸಮಾಜದಲ್ಲಿ ಶಾಂತಿಭಂಗ ಉಂಟುಮಾಡಿ ಸಮಾಜದಲ್ಲಿ ಚುಣಾವಣಾ ಸಂದರ್ಭದಲ್ಲಿ ಗಲಭೆ ಉಂಟುಮಾಡುವ ಹುನ್ನಾರದಿಂದ ಆರೋಪಿಗಳು ಲೋಕಸಭಾ ಚುನಾವಣಾ ಸಂದರ್ಭದಲ್ಲಿ ನಾಡಿನ ಮತದಾರರನ್ನು ದಾರಿ ತಪ್ಪಿಸಲು ಈ ರೀತಿ ಸುಳ್ಳು ಸುದ್ದಿಗಳನ್ನು ಹರಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

p>

LEAVE A REPLY

Please enter your comment!
Please enter your name here