ತಾಲೂಕಿನ ಅಂಬೇಡ್ಕರ್ ಭವನಕ್ಕೆ ಮಂಜೂರಾತಿ ಆಗದೇ ಅನುದಾನ ತಡೆ ಹಿಡಿಯುವುದು ಹೇಗೆ- ಶಾಸಕರ ಆರೋಪಕ್ಕೆ ಕಾಂಗ್ರೆಸ್ ನಾಯಕರ ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ತಾಲೂಕು ಕ್ರೀಡಾಂಗಣಕ್ಕೆ ಹಿಂದಿನ ಸರಕಾರ ಮಾಡಿದ ರೂ.10 ಕೋಟಿ ಬಿಡುಗಡೆ ಮಾಡಿದ್ದು ಕಾಂಗ್ರೆಸ್ ಸರಕಾರ ಬಂದಾಗ ತಡೆ ಹಿಡಿದಿದ್ದಾರೆ ಎಂದು ಶಾಸಕರು ನಮ್ಮ ಪಕ್ಷದ ನಾಯಕರ ವಿರುದ್ಧ ಆರೋಪ ಮಾಡಿದ್ದಾರೆ.

ಕ್ರೀಡಾಂಗಣ, ಅರಸಿನಮಕ್ಕಿಯಲ್ಲಿ ಮೋಡೆಲ್ ಶಾಲೆ ನಿರ್ಮಾಣ ಮಾಡವುದನ್ನು ತಡೆ ಹಿಡಿದಿದ್ದಾರೆ ಎಂದು ಆರೋಪಿದ್ದಾರೆ. ಆದರೆ ಇದು ಯಾವುದಕ್ಕೂ ಮಂಜೂರು ಆಗದೇ ಇದ್ದು ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ತಾಲೂಕಿಗೆ ಅನುದಾನ ಮಂಜೂರು ಮಾಡಿದೆ ಎಂದು ಸುಳ್ಳು ಹೇಳಿದ್ದು ಯಾವುದಕ್ಕೂ ಮಂಜೂರಾತಿ ಆಗಲಿಲ್ಲ ಕೇವಲ ಪ್ರಸ್ತಾವನೆ ಮಾತ್ರ ಆಗಿರುವುದು ಎಂದು ಕಾಂಗ್ರೆಸ್ ಪಕ್ಷದ ಚುನಾವಣಾ ಉಸ್ತುವಾರಿ ಜಿ. ಪ. ಮಾಜಿ ಉಪಾಧ್ಯಕ್ಷ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ಎಸ್ ಸಿ ಘಟಕದ ಅಧ್ಯಕ್ಷ ಶೇಖರ ಕುಕ್ಕೇಡಿ ಹೇಳಿದರು. ಅವರು ಎ.11ರಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ನಮ್ಮ ನಾಯಕ ಕೆಳೆದ ವಿಧಾನ ಸಭಾ ಅಭ್ಯರ್ಥಿ ರಕ್ಷಿತ್ ಶಿವರಾಮ್ ರವರ ಮತ್ತು ಮಾಜಿ ಶಾಸಕ ಕೆ. ವಸಂತ ಬಂಗೇರರ ವಿರುದ್ಧ ಸುಳ್ಳು ಆರೋಪವನ್ನು ಶಾಸಕರು ಮಾಡಿದ್ದಾರೆ. ರಕ್ಷಿತ್ ಶಿವರಾಮ್ ರವರು ಪೆನ್ನು ಪುಸ್ತಕ ವಿತರಣೆ ಮಾಡಿದ್ದು ಅವರು ದುಡಿದ ಹಣದಿಂದ ಆದರೆ ಶಾಸಕರು ಮರಕಳ್ಳತನ, ಮರಳು ಕಳ್ಳತನ,40% ಕಮಿಷನ್, ರೆಡ್ಡಿಯ ಕೊಳ್ಳೆ ಹೊಡೆದ ಹಣವನ್ನು ಹಂಚಿದ್ದಾರೆ. ತಾಲೂಕಿನಲ್ಲಿ ಬ್ರಹ್ಮಕಲಶೋತ್ಸವ ಶಾಸಕ ನೇತೃತ್ವದಲ್ಲಿ ನಡೆದಾಗ ಏನೇನೋ ರಾಜಕೀಯ ಮಾಡಿ ಅವ್ಯವಹಾರ ಮಾಡಿ ಯಾರಿಗೆಲ್ಲ ಪೇಮೆಂಟ್ ಬಾಕಿ ಇಟ್ಟಿರುವ ಬಗ್ಗೆ ದಾಖಲೆ ಸಹಿತ ಸಾಬೀತು ಮಾಡುತ್ತೇವೆ ಎಂದರು.

ಚುನಾವಣಾ ಪೂರ್ವದಲ್ಲಿ ಅಂಬೇಡ್ಕರ್ ಭವನ ಮಾಡುತ್ತೇನೆ ಎಂದು ಮತ ಯಾಚನೆ ಮಾಡಿ ಮನೆ ಮನೆಗೆ ಹಂಚಿದ ಪ್ರಣಾಳಿಕೆಯಲ್ಲಿ ಸುಳ್ಳು ಮಾಹಿತಿ ನೀಡಿ ಜನರನ್ನು ವಂಚಿಸಿದ್ದಾರೆ ಎಂದು ಆರೋಪಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ವಂದನಾ ಭಂಡಾರಿ,, ಪ್ರಮುಖರಾದ ನಗರ ಸಮಿತಿಯ ನೇಮಿರಾಜ, ಲಾಯಿಲ ಉಸ್ತುವಾರಿ ಹನೀಫ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಶ್ರೀಧರ, ಬೆಳ್ತಂಗಡಿ ಸಹಕಾರಿ ಯೂನಿಯನ್ ಅಧ್ಯಕ್ಷ ಅರವಿಂದ ಜೈನ್ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here