ಉಜಿರೆ ಪ್ರಗತಿ ಮಹಿಳಾ ಮಂಡಲದಿಂದ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ

0

ಉಜಿರೆ: ಪ್ರಗತಿ ಮಹಿಳಾ ಮಂಡಲ ಪ್ರಸ್ತುತ ಪಡಿಸುವ ಹತ್ತು ದಿನಗಳ ಕಾಲ ನಡೆಯಲಿರುವ ಮಕ್ಕಳ ಆಕರ್ಷಕ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಅನುಗ್ರಹ ಪ್ರೈಮರಿ ಶಾಲೆಯ ಸಭಾಂಗಣದಲ್ಲಿ ಎ.10ರಂದು ನಡೆಯಿತು.

ಅನುಗ್ರಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವ.ಫಾ.ಜೇಮ್ಸ್ ಡಿಸೋಜಾ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಅಗಮಿಸಿದ ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾದ ವ.ಫಾ.ವಿಜಯ್ ಲೋಬೋ ರವರು ಬೇಸಿಗೆ ಶಿಬಿರಕ್ಕೆ ಆಗಮಿಸಿದ ಮಕ್ಕಳಿಗೆ ಶುಭಹಾರೈಸಿದರು.

ಮಹಿಳಾ ಮಂಡಲದ ಸದಸ್ಯೆ ಮಮತಾ ರವರ ಪ್ರಾರ್ಥನೆಯ ಮೂಲಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಜಯಶ್ರೀ ಪ್ರಕಾಶ್ ಅತಿಥಿಗಳನ್ನು ಸ್ವಾಗತಿಸಿದರು.

ಭವ್ಯಶ್ರೀ ನಿರೂಪಿಸಿ, ಗಾಯತ್ರಿ ಶ್ರೀಧರ್ ರವರ ಧನ್ಯವಾದಗೈದರು.

ಮಹಿಳಾ ಮಂಡಲದ ಸದಸ್ಯರು, ಶಿಬಿರಾರ್ಥಿಗಳು, ಮಕ್ಕಳ ಹೆತ್ತವರು ಉಪಸ್ಥಿತರಿದ್ದರು.ಏ.19ರವರೆಗೆ ಶಿಬಿರವು ನಡೆಯುತ್ತದೆ.

LEAVE A REPLY

Please enter your comment!
Please enter your name here