ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ- ಹಸಿರು ಹೊರೆ ಕಾಣಿಕೆ ಸಮರ್ಪಣೆ, ಭವ್ಯ ಮೆರವಣಿಗೆ

0

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ.8ರಿಂದ ಎ.17ರವರೆಗೆ ವೇದಮೂರ್ತಿ ಉದಯ ಪಾಂಗಣ್ಣಾಯರವರ ನೇತೃತ್ವದಲ್ಲಿ ವಿಜೃಂಭಣೆಯ ಅಷ್ಠಬಂಧ ಬ್ರಹ್ಮಕಲಶೋತ್ಸವ ನೆರವೇರಲಿದೆ.

ಇಂದು ಸಂಜೆ ಹೊರೆಕಾಣಿಕೆಯ ಭವ್ಯ ಮೆರವಣಿಗೆಯು ದೇವಸ್ಥಾನಕ್ಕೆ ಸಂಬಂಧಪಟ್ಟ ಪಡಂಗಡಿ, ಕುವೆಟ್ಟು, ಸೋಣಂದೂರು, ಓಡಿಲ್ನಾಳ, ಗ್ರಾಮದಿಂದ ಹಸಿರುವಾಣಿ ಹೊರೆಕಾಣಿಕಯು ಕಿನ್ನಿಗೋಳಿ ಬಂದು ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕ ಮಕ್ಕಳಿಂದ ನೃತ್ಯ ಭಜನೆಯ ಮೂಲಕ ಹೊರೆಕಾಣಿಕೆ ಮೆರವಣಿಗೆ ವೈಭಯುತವಾಗಿ ನಡೆಯಿತು.

ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಕುಟುಂಬಸ್ಥರು ಕೊಡುಗೆ ನೀಡಿದ ನೂತನ ಮಹಾದ್ವಾರವನ್ನು ಮಾತೃಶ್ರೀ ಕಾಶಿ ಶೆಟ್ಟಿ ನವಶಕ್ತಿ ಉದ್ಘಾಟಿಸಿದರು.ಹೊರೆಕಾಣಿಕೆಯಲ್ಲಿ ನೂರಾರು ವಾಹನಗಳ ಮೂಲಕ ಕ್ಷೇತ್ರಕ್ಕೆ ಸಾಗಿ ಬಂತು. ವಿವಿಧ ಭಜನಾ ತಂಡಗಳ ಕುಣಿತಾ ಭಜನೆ ಎಲ್ಲರ ಗಮನ ಸೆಳೆಯಿತು.

ಚೆಂಡೆ, ಕೀಲು ಕುದುರೆ, ವಾದ್ಯ ಘೋಷ, ವಿವಿಧ ವೇಷ ಭೂಷಣಗಳೊಂದಿಗೆ ಹಸಿರುವಾಣಿ ಹೊರೆಕಾಣಿಕೆ ವೈಭವಯುತವಾಗಿ ನಡೆಯಿತು.ನಂತರ ಉಗ್ರಾಣ ಮಹೂರ್ತ ಉದ್ಘಾಟನೆಯನ್ನು ಶಿವಶಂಕರ್ ನಾಯಕ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಎಮ್. ರಘುರಾಮ ಭಟ್ ಮಠ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಕುಮಾ‌ರ್ ಜೈನ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ್‌, ಕೋಶಾಧಿಕಾರಿ ವಸಂತ ಗೌಡ ವರಕಬೆ, ಪ್ರಧಾನ ಕಾರ್ಯದರ್ಶಿ ಚಿದಾನಂದ ಇಡ್ಯ ಸೇವಾ ಸಮಿತಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ ಹೊರೆಕಾಣಿಕೆ ಸಮಿತಿ ಸಂಚಾಲಕ ದಯಾನಂದ ಕುಲಾಲ್ ಪುತ್ಯೆ ಸಹ ಸಂಚಾಲಕ ಪ್ರದೀಪ್ ಶೆಟ್ಟಿ ಪಾಡ್ಯಾರಮಜಲು, ವಿವಿಧ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಊರ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here