ಮದ್ದಡ್ಕ ಹೆಲ್ಪ್ ಲೈನ್ ವತಿಯಿಂದ ಬೃಹತ್ ಇಫ್ತಾರ್ ಕೂಟ: ಅಭಿನಂದನಾ ಕಾರ್ಯಕ್ರಮ

0

ಬೆಳ್ತಂಗಡಿ: ಮದ್ದಡ್ಕ ಹೆಲ್ಪ್ ಲೈನ್ ಮತ್ತು ಚಾರಿಟೇಬಲ್ ಫೌಂಡೇಶನ್ ವತಿಯಿಂದ ಪುರುಷರು ಮಾತ್ರವಲ್ಲದೆ ಪ್ರಥಮ ಬಾರಿಗೆ ಮಹಿಳೆಯರಿಗೂ ಕೂಡಾ ಅದ್ದೂರಿಯಾದ ಇಫ್ತಾರ್ ಕೂಟವನ್ನು ನೂರುಲ್‌ ಹುದಾ ಜುಮಾ ಮಸ್ಜಿದ್ ಮದ್ದಡ್ಕ ವಠಾರದಲ್ಲಿ ನಡೆಸಲಾಯಿತು.

ಇಫ್ತಾರ್ ಕೂಟದ ಜೊತೆಗೆ ವಿಶೇಷ ಧಾರ್ಮಿಕ ತರಗತಿ ಮತ್ತು ಸ್ಮಾರ್ಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದಂತಹ ಮದರಸ ವಿಧ್ಯಾರ್ಥಿಗಳಿಗೆ ಮತ್ತು ಅವರ ಸಾಧನೆಗೆ ಸ್ಪೂರ್ತಿಯಾದ ಉಸ್ತಾದರುಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಯಿತು.

ಅದರೊಂದಿಗೆ ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯೆ ಆಮಿನಾರವರ ಸಮಾಜಮುಖಿ ಕೆಲಸ ಕಾರ್ಯಗಳನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮದ್ದಡ್ಕ ಮಸೀದಿಯ ಧರ್ಮಗುರು ಹಸನ್ ಮುಬಾರಕ್ ಸಖಾಫಿ ನೆರವೇರಿಸಿದರು.

ಸಭಾಧ್ಯಕ್ಷತೆಯನ್ನು ಮದ್ದಡ್ಕ ಹೆಲ್ಪ್ ಲೈನ್ ಅಧ್ಯಕ್ಷ ಶಾಕಿರ್ ಚಿಲಿಂಬಿ ವಹಿಸಿದ್ದರು.ಸಮಾರಂಭದಲ್ಲಿ ಸಮಾಜ ಸೇವಕ ಅಬ್ಬೋನು ಮದ್ದಡ್ಕ, ಮಸೀದಿ ಆಡಳಿತ ಸಮಿತಿಯ ಕಾರ್ಯದರ್ಶಿ ಎಮ್ ಸಿರಾಜ್ ಚಿಲಿಂಬಿ, ಸಂಪನ್ಮೂಲ ವ್ಯಕ್ತಿ ಉಮರ್ ಮಾಸ್ಟರ್ ಮಾತನಾಡಿದರು.

ಜಮಾಅತಿನ ಹಿರಿಯರಾದ ಉಮರಬ್ಬ ಯು.ಆರ್, ಎಮ್.ಎಚ್ ಅಬೂಬಕ್ಕರ್, ಎಚ್ ಎಮ್‌ ಹಸನಬ್ಬ, ಮದ್ದಡ್ಕ ಹೆಲ್ಪ್ ಲೈನ್ ಉಪಾಧ್ಯಕ್ಷ ಝಹೀರ್ ಮದ್ದಡ್ಕ, ಕೋಶಾಧಿಕಾರಿ ರಫೀಕ್ ಲಿಂಬೆ, ಮಾಜಿ ಅಧ್ಯಕ್ಷ ಝಹೀರ್ ಬಿನಾ ಮತ್ತು ಉಬೈದುಲ್ಲಾ ಯು.ಆರ್, ಕಾರ್ಯಕಾರಿಣಿ ಸದಸ್ಯರಾದ ಸ್ವಾಲಿ ಆಲಂದಿಲ, ಇರ್ಶಾದ್ ಪೊಲೀಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೆಲ್ಪ್‌ಲೈನ್ ಕಾರ್ಯದರ್ಶಿ ಮುಸ್ತಫಾ ಎಚ್.ಎಸ್ ಸ್ವಾಗತಿಸಿದರು.

ಸದಸ್ಯ ಅಲ್ತಾಫ್ ನಿರೂಪಿಸಿದರು.

p>

LEAVE A REPLY

Please enter your comment!
Please enter your name here