ಬೆಳ್ತಂಗಡಿ: ಸ.ಪ್ರ.ದ ಕಾಲೇಜಿನಲ್ಲಿ 2023-24ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಮಾ.08ರಂದು ಅಂಬೇಡ್ಕರ್ ಭವನ ಲಾಯಿಲ ಪಡ್ಲಾಡಿಯಲ್ಲಿ ನಡೆಯಿತು.ಬೆಳ್ತಂಗಡಿ ಸ.ಪ್ರ.ದ ಕಾಲೇಜು, ಪ್ರಾಂಶುಪಾಲರು ಪ್ರೊ.ರಾಘವ ಎನ್ ಇವರು ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಶಿಬಿರಾರ್ಥಿಗಳ ಒಂದು ವಾರದ ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಯಾನಂದ ಕಾರ್ಯಕ್ರಮ ಸಂಯೋಜಕರು, ತಾ.ಪಂ ಬೆಳ್ತಂಗಡಿ ಇವರು ಪರಿಸರ ಸ್ವಚ್ಚತೆ, ಆರೋಗ್ಯದ ಬಗ್ಗೆ ಜಾಗೃತಿ ಹಾಡುಗಳನ್ನು ಹಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.ಸೂರಪ್ಪ ಅಧ್ಯಕ್ಷರು, ಎಸ್ ಡಿ ಎಂಸಿ, ಜಯಂತಿ ಅನ್ನಡ್ಕ ಸದಸ್ಯರು, ಗ್ರಾಮ ಪಂಚಾಯತ್ ಲಾಯಿಲ, ಜಯಂತಿ ಎಂ.ಕೆ, ಅಧ್ಯಕ್ಷರು ಗ್ರಾಮ ಪಂಚಾಯತ್ ಲಾಯಿಲ, ರಾಜೇಶ್ವರಿ ಬಿ.ಎಸ್ ಮುಖ್ಯೋಪಾಧ್ಯಾಯರು, ಪ್ರಸಾದ್ ಏಣಿಂಜೆ, ಸದಸ್ಯರು ಗ್ರಾಮ ಪಂಚಾಯತ್ ಲಾಯಿಲ, ದಿವಾಕರ ಉಪಾಧ್ಯಕ್ಷರು, ಎಸ್ ಡಿ ಎಂ ಸಿ ಇವರು ಶಿಬಿರಾರ್ಥಿಗಳ ಸಮಾಜಮುಖಿ ಕೆಲಸವನ್ನು ಶ್ಲಾಸಿದರು.
ಪ್ರೊ. ರೊನಾಲ್ಡ್ ಪ್ರವೀಣ್ ಕೊರೆಯ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳ ಶಿಬಿರದ ವರದಿಯನ್ನು ವಾಚಿಸಿದರು. ಹಾಗೂ ಶಿಬಿರಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಪ್ರೊ.ಕವಿತ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಘಟಕ-2 ಹಾಗೂ ವಿದ್ಯಾರ್ಥಿ ನಾಯಕರುಗಳಾದ ಕು. ಉಮಾವತಿ ಡಿ.ಎಸ್ ಹಾಗೂ ಶಿವಾನಂದ ದ್ವಿತೀಯ ಬಿ.ಎ ಇವರು ವೇದಿಕೆಯಲ್ಲಿದ್ದು ಸಹಕರಿಸಿದರು.
ಕು. ಉಮಾವತಿ ಮತ್ತು ಬಳಗದವರು ಪ್ರಾರ್ಥಿಸಿದರು. ಶರತ್ ಪ್ರಥಮ ಬಿ.ಎ ವಂದಿಸಿದರು. ಸಂದೇಶ್ ಎಸ್, ಪ್ರಥಮ ಬಿಬಿಎ ಸ್ವಾಗತಿಸಿದರು. ಕು. ಶುಭವತಿ ಪ್ರಥಮ ಬಿ.ಕಾಂ ನಿರೂಪಿಸಿದರು.