ನಾವರ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಮಾ.31ರಿಂದ ಎ.4ರ ತನಕ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಮಾ.31ರಂದು ನಡೆಯಿತು.
ಪಿಲ್ಯ ದಿ.ಶ್ರೀಧರ ಆಚಾರ್ಯ ಸಭಾ ಮಂಟಪದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ನಾವರಗುತ್ತು ರವಿರಾಜ ಹೆಗ್ಡೆಯವರು ದೀಪ ಪ್ರಜ್ವಲಿಸುವುದರೊಂದಿಗೆ ನೆರವೇರಿ ಸಮಾರಂಭಕ್ಕೆ ಶುಭಕೋರಿ 14 ವರ್ಷಕ್ಕೆ ಮುಂಚೆ ನಡೆದ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತೊಮ್ಮೆ ನೋಡುವ ಭಾಗ್ಯ ನಮ್ಮದಾಗಿದೆ. ಊರವರ ಪರವೂರಿನ ಭಕ್ತ ಬಂಧುಗಳ ಸಹಕಾರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗಿದ್ದು ಎಲ್ಲರಿಗೂ ದೇವರು ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸುಲ್ಕೇರಿ ಗ್ರಾ.ಪಂ ಅಧ್ಯಕ್ಷರಾದ ಗಿರಿಜಾ ನಾವರ, ಕರಂಬಾರು ಕೇಳ್ಕರೇಶ್ವರ ದೇವಸ್ಥಾನದ ಅಧ್ಯಕ್ಷ ಸುಧೀಶ್ ಹೆಗ್ಡೆ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಮೇಲ್ವೀಚಾರಕಿ ಸುಮಂಗಲ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಪ್ರವೀಣ್ ಹೆಚ್.ಎಸ್ ಬಳಂಜ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದ್ಯಕ್ಷ ನಿತ್ಯಾನಂದ ಯೋಗಕ್ಷೇಮ ನಾವರ ವಹಿಸಿದ್ದರು.
ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಪ್ರದಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ, ಹೊರೆಕಾಣಿಕೆ ಸಮಿತಿ ಸಂಚಾಲಕಿ ಪುಷ್ಪಾವತಿ ನಾವರ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಜಯಾನಂದ ಪೂಜಾರಿ ಕೊರಲ್ಲ ಭಾಗವಹಿಸಿದ್ದರು.

ಈ ದಿನ ವಿಶೇಷವಾಗಿ ವ್ರವಸ್ಥಾಪನ ಸಮಿತಿ ಅಧ್ಯಕ್ಷರಾದ ಪಿ.ಹೆಚ್ ಪ್ರಕಾಶ್ ಶೆಟ್ಟಿಯವರ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ರವಿರಾಜ ಕೆಲ್ಲ, ಗೌರವಧ್ಯಕ್ಷರಾದ ರವಿರಾಜ ಹೆಗ್ಡೆ ಇವರ ಸಹಕಾರದಲ್ಲಿ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದಿಂದ ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರು ಉದ್ಘಾಟಿಸಿರುವ ವಿವಿಧ ಗ್ರಾಮಗಳಿಂದ ಆಗಮಿಸಿದ ಹೊರೆಕಾಣಿಕೆಯ ಭವ್ಯ ಮೆರವಣಿಗೆ ವಿವಿಧ ಕುಣಿತಾ ಭಜನಾ ತಂಡಗಳೊಂದಿಗೆ ಮತ್ತು ಮಂಗಳೂರು ಮೂಕಾಂಬಿಕ ಚೆಂಡೆ ಬಳಗದೊಂದಿಗೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸುಲ್ಕೇರಿ ಶ್ರೀರಾಮ ಶಾಲೆ ವಿದ್ಯಾರ್ಥಿಗಳಿಂದ ಸ್ಥಳಿಯ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.
ಧನ್ವಿತಾ, ಧನುಶ್ರೀ, ಪ್ರಣೀತಾ ಪ್ರಾರ್ಥಿಸಿದರು.
ಜೀರ್ಣೋದ್ಧಾರ ಸಮಿತಿಯ ಪ್ರದಾನ ಕಾರ್ಯದರ್ಶಿ ವಿಜಯ ಕುಮಾರ್ ಜೈನ್ ನಾವರ ಕಾರ್ಯಕ್ರಮ ನಿರ್ವಹಿಸಿದರು.ಸಭಾ ಸಾಂಸ್ಕೃತಿಕ ಸಮಿತಿ ಸಂಚಾಲಕ ವೀರೇಂದ್ರ ಕುಮಾರ್ ನಾವರ ಸ್ವಾಗತಿಸಿದರು.