ಧರ್ಮಸ್ಥಳ: ಶ್ರೀ ಧ.ಮ.ಆಂ.ಮಾ ಶಾಲೆಯಲ್ಲಿ ನಾಲ್ಕು ದಿನಗಳ ಬೇಸಿಗೆ ಶಿಬಿರವು ಬಹಳ ಅದ್ದೂರಿಯಾಗಿ ನೆರವೇರಿತು.
ಈ ಶಿಬಿರದಲ್ಲಿ ಮಕ್ಕಳು ಗೊಂಬೆ ತಯಾರಿ, ತೆಂಗಿನಗರಿ ಆಟಿಕೆಗಳು, ಬಟ್ಟೆ ಚೀಲ ಉತ್ತಮ ಗುಣಮಟ್ಟದ ಆಹಾರ ತಯಾರಿ ವಿಜ್ಞಾನ ಮೇಳ ಚಿತ್ರಕಲೆ ಮುಂತಾದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು.
ಇದರ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಎಸ್ ಡಿ ಎಂ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಅವನೀಶ್ ಪಿ ಆಗಮಿಸಿದ್ದರು.
ಇವರು ಮಕ್ಕಳಿಗೆ ನಿಜವಾದ ಜೀವನ ಶಿಕ್ಷಣವನ್ನು ಪೋಷಕರು ಹಾಗೂ ಶಿಕ್ಷಕರು ಕಲಿಸಿಕೊಡಬೇಕೆಂದು ತಿಳಿಸಿದರು. ಬದುಕಲು ಬೇಕಾದ ಸಾಮಾನ್ಯ ಜ್ಞಾನವನ್ನು ಪ್ರಮುಖವಾಗಿ ಮಕ್ಕಳು ಕಲಿಯಬೇಕೆ ಹೊರತು ಪರೀಕ್ಷೆಯ ಉತ್ತಮ ಅಂಕಗಳಿಂದ ಅಲ್ಲ ಎಂದು ತಿಳಿಹೇಳಿದರು.
ಶಾಲೆಯ ಸಂಚಾಲಕ ಅನಂತ ಪದ್ಮನಾಭ ಭಟ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಮಕ್ಕಳಿಗೆ ಶುಭನುಡಿದರು.ಶಾಲಾ ವಠಾರದಲ್ಲಿ ಮಕ್ಕಳು ತಯಾರಿಸಿದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ಇದ್ದವು.
ಕಾರ್ಯಕ್ರಮವು ಪ್ರಾಪ್ತಿ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು.ಸಹ ಶಿಕ್ಷಕಿ ಆಶಾ ಕಾರ್ಯಕ್ರಮವನ್ನು ನಿರೂಪಿಸಿ ಮುಖ್ಯೋಪಾಧ್ಯಾಯಿನಿ ಪರಿಮಳ ಎಮ್.ವಿ ಸ್ವಾಗತಿಸಿ, ಗೀತಾ ಅತಿಥಿಗಳ ಪರಿಚಯ ನೀಡಿ, ಸಹ ಶಿಕ್ಷಕಿ ದಿವ್ಯ ವಂದಿಸಿದರು.
ಈ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳು ಹಾಗೂ ಪೋಷಕರು ಸಾಕ್ಷಿಯಾದರು.