ಮಡಂತ್ಯಾರು: ಚರ್ಚ್ ನಲ್ಲಿ ಈಸ್ಟರ್ ಹಬ್ಬ ಆಚರಣೆ

0

ಮಡಂತ್ಯಾರು: ಏಸು ಕ್ರಿಸ್ತರು 3ನೇ ದಿನದಲ್ಲಿ ಪುನರುತ್ತಾನರಾಗುತ್ತಾರೆ ಎಂದು ಮೊದಲೇ ಬೈಬಲ್ ಬರಹದಲ್ಲಿದ್ದ ಹಾಗೆ ಮಾ.30ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಬಲಿಪೂಜೆಗಳು ನಡೆಯಿತು.

ಬಲಿ ಪೂಜೆ ಮತ್ತು ಹಬ್ಬದ ಸಂದೇಶವನ್ನು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾದ್ಯಾಯ ಫಾ.ದೀಪಕ್ ಲಿಯೋ ಡೇಸಾ ನೀಡಿದರು.

ಸೇಕ್ರೆಡ್ ಹಾರ್ಟ್ ಚರ್ಚ್ ಪ್ರದಾನ ಧರ್ಮಗುರು ಫಾ.ಸ್ಟ್ಯಾನಿ ಗೋವಿಯಸ್, ಸಹಾಯಕ ಧರ್ಮಗುರು ವ.ವಿಲಿಯಂ ಡಿ’ಸೋಜಾ ಬಲಿ ಪೂಜೆಯಲ್ಲಿ ಸಹಕರಿಸಿದರು.

ಮಾ.31ರಂದು ಭಾನುವಾರ ಏಸು ಕ್ರಿಸ್ತರ ಪುನರುತ್ತಾನದ ಹಬ್ಬ (ಈಸ್ಟರ್ ಹಬ್ಬ) ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

LEAVE A REPLY

Please enter your comment!
Please enter your name here