ಕನ್ಯಾಡಿ: ಶ್ರೀ ರಾಮ ಕ್ಷೇತ್ರ 64ನೇ ವರ್ಷದ ಶ್ರೀ ರಾಮತಾರಕ ಮಂತ್ರ ಸಪ್ತಾಹ, ಪ್ರತಿಷ್ಠಾ ಜಾತ್ರಾ ಮಹೋತ್ಸವದ ಸಮಾಲೋಚನಾ ಸಭೆ

0

ಧರ್ಮಸ್ಥಳ : ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್ ನಿತ್ಯಾನಂದ ನಗರದ 64 ನೇ ವರ್ಷದ ಶ್ರೀ ರಾಮ ತಾರಕ ಸಪ್ತಾಹ, ಕ್ಷೇತ್ರದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮ ರಥೋತ್ಸವ ಎ.10ರಿಂದ 17 ರ ವರೆಗೆ ನಡೆಯಲಿದ್ದು ಇದರ ಪೂರ್ವ ತಯಾರಿ ಪ್ರಯುಕ್ತ ಸಮಾಲೋಚನಾ ಸಭೆ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ರಾಮ ಕ್ಷೇತ್ರದಲ್ಲಿ ಮಾ.31ರಂದು ನಡೆಯಿತು.

ಸಭೆಯಲ್ಲಿ ತಾಲೂಕಿನ ವಿವಿಧ ಗ್ರಾಮದ ಪ್ರಮುಖರು, ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದು 7 ದಿನಗಳಲ್ಲಿ ನಡೆಯುವ ಭಜನೆ,5 ದಿನಗಳಲ್ಲಿ ನಡೆಯುವ ರಥೋತ್ಸವ, ಅಲಂಕಾರ, ಉಟೋಪಚಾರ, ಕಾರ್ಯಕ್ರಮದ ಯಶಸ್ವಿಗೆ ವಿವಿಧ ಗ್ರಾಮದ ಪ್ರಮುಖರಿಗೆ ಜವಾಬ್ದಾರಿಯನ್ನು ಹಂಚಲಾಯಿತು. ಬಳಿಕ ಸ್ವಾಮೀಜಿ ಆಶೀರ್ವಚನ ನೀಡಿದರು.

ಟ್ರಷ್ಟಿ ತುಕಾರಾಮ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಪ್ರಮುಖರಾದ ತಿಮ್ಮಪ್ಪ ಗೌಡ ಬೆಳಾಲು, ಪ್ರಶಾಂತ್ ಪಾರೆಂಕಿ, ಪುರುಷೋತ್ತಮ ಧರ್ಮಸ್ಥಳ, ಧರ್ಮಸ್ಥಳ ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ,ಮನೋಹರ್ ರಾವ್, ನಿವೃತ್ತ ಬಿ ಎಸ್ ಎನ್ ಎಲ್ ಎಸ್ ಡಿ ಇ ಅಣ್ಣಿ ಪೂಜಾರಿ, ಜಯಶಂಕರ್ ಉಜಿರೆ, ಕೃಷ್ಣಪ್ಪ ಗುಡಿಗಾರ್, ಜಾರಪ್ಪ ಪೂಜಾರಿ ಬೆಳಾಲು ಗಂಗಾಧರ ಸಾಲಿಯಾನ್ ಬೆಳಾಲು, ದಯಾನಂದ ಪಿ. ಬೆಳಾಲು, ಸೋಮನಾಥ್ ಧರ್ಮಸ್ಥಳ, ಸಚಿನ್, ಸುನಿಲ್ ಕನ್ಯಾಡಿ, ಪ್ರವೀಣ್ ಆರ್ಲ, ಅಣ್ಣಿ ಗೌಡ, ಸುಜಾತಾ ಅಣ್ಣಿ ಪೂಜಾರಿ, ಮೋಹನ ಪೂಜಾರಿ ಮಾಯ,ಕ್ಷೇತ್ರದ ಭಕ್ತರು, ಸಿಬ್ಬಂದಿಗಳು, ಹಾಜರಿದ್ದರು.

LEAVE A REPLY

Please enter your comment!
Please enter your name here