ನೆಲ್ಯಾಡಿಯಲ್ಲಿ ಸಂಯುಕ್ತ ಶುಭ ಶುಕ್ರವಾರದ ಆಚರಣೆ

0

ನೆಲ್ಯಾಡಿ: ನೆಲ್ಯಾಡಿ ಪರಿಸರದ ಸೆಂಟ್ ಮೇರಿಸ್ ಚರ್ಚ್ ಆರ್ಲ, ಸೆಂಟ್ ಅಲ್ಫೋನ್ಸ ಚರ್ಚ್, ಸೆಂಟ್ ಸ್ಟೀಫನ್ಸ್ ಚರ್ಚ್, ಲಿಟಲ್ ಫ್ಲವರ್ ಚರ್ಚ್ ಇಚ್ಚಿಲಂಪಾಡಿ ಜಂಟಿಯಾಗಿ ಈ ವರ್ಷದ ಶುಭ ಶುಕ್ರವಾರ ಆಚರಣೆಗಳನ್ನು ಆಚರಿಸಲಾಯಿತು.

ಲೋಕ ಕಲ್ಯಾಣಕ್ಕಾಗಿ, ಪಾಪ ಕೂಪ ದಿಂದ ಮನುಜ ಕುಲವನ್ನು ರಕ್ಷಿಸಲು, ಎಲ್ಲಾ ರೀತಿಯ ಗುಲಾಮ ಗಿರಿಯಿಂದ ಮಾನವ ವಂಶ ವನ್ನು ರಕ್ಷಿಸಿ ವಿಶ್ವ ಭಾತೃತ್ವದ ಸಮಾಜ ನಿರ್ಮಾಣಕ್ಕಾಗಿ ಕಪಾಲ ಬೆಟ್ಟದಲ್ಲಿ ಯೇಸು ಕ್ರಿಸ್ತರು ಶಿಲುಭೆಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದರು ಇದರ ಸ್ಮರಣೆಯೇ ಶುಭ ಶುಕ್ರವಾರ.

ಎಲ್ಲಾ ಚರ್ಚ್ ಗಳಲ್ಲಿ ಬೆಳಿಗ್ಗೆಯಿಂದಲೇ ಪೂಜಾ ವಿಧಿಗಳು ನಡೆದು ನೂರಾರು ಮಂದಿ ಭಾಫಾವಹಿಸಿದರು.

ಪಾಸ್ಕ ಗುರುವಾರದಂದು ಯೇಸು ಕ್ರಿಸ್ತರು ತಮ್ಮ ಶಿಷ್ಯರ ಪಾದಗಳನ್ನು ತೊಳೆದು ಪವಿತ್ರ ಪರಮ ಪ್ರಸಾದದ ಸ್ಥಾಪನೆಯ ಸ್ಮರಣೆಯನ್ನು ಮಾಡಲಾಯಿತು.

ನೆಲ್ಯಾಡಿ ಅಲ್ಫೋನ್ಸ ಚರ್ಚ್ ನಲ್ಲಿ ಪೂಜಾ ವಿಧಿಗಳಿಗೆ ವಂದನಿಯ ಫಾ.ಶಾಜಿ ಮಾತ್ಯು ನೇತೃತ್ವ ವಹಿಸಿದ್ದರು.

LEAVE A REPLY

Please enter your comment!
Please enter your name here