ಕ್ರೈಸ್ತರಿಗೆ ಇಂದು (ಮಾ.28) ಪವಿತ್ರ ಗುರುವಾರ- ಏಸು ಕ್ರಿಸ್ತರ ಕೊನೆಯ ಭೋಜನ

0

ಬೆಳ್ತಂಗಡಿ : ಕ್ರೈಸ್ತರು ಇಂದು(ಮಾ.28) ಪವಿತ್ರ ಗುರುವಾರ ಆಚರಿಸುತ್ತಿದ್ದಾರೆ. ಯೇಸು ಕ್ರಿಸ್ತರ ಕೊನೆಯ ಭೋಜನದ ದಿನವನ್ನು ಸ್ಮರಿಸಲಾಗುತ್ತಿದೆ. ಗುರುವಾರ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಬಲಿ ಪೂಜೆಗಳು ಹಾಗೂ ವಿಶೇಷ ಪ್ರಾರ್ಥನೆಗಳನ್ನು ಆಯೋಜಿಸಲಾಗುತ್ತದೆ. ಈ ವೇಳೆ 12 ಮಂದಿ ಶಿಷ್ಯರ ಪಾದ ತೊಳೆಯುವ ಕ್ರಿಯೆ ನಡೆಯುತ್ತದೆ. ಬಲಿ ಪೂಜೆಯ ಮಧ್ಯದಲ್ಲಿ ಯಾಜಕರು ತಮ್ಮ . ಬಲಿಪೂಜೆಯ ಉಡುಪನ್ನು ತೆಗೆದಿಟ್ಟು 12 ಮಂದಿ ಶಿಷ್ಯರ ಪಾದ ತೊಳೆದು ಪಾದವನ್ನು ಚುಂಬಿಸುತ್ತಾರೆ. ಬಳಿಕ ಬಲಿಪೂಜೆಯನ್ನು ಮುಂದುವರಿಸಲಾಗುತ್ತದೆ.

ಅಂತ್ಯದಲ್ಲಿ ಪರಮ ಪ್ರಸಾದದ ವಿಶೇಷ ಆರಾಧನೆ ನಡೆಸಲಾಗುತ್ತದೆ. ಇವತ್ತಿನಿಂದ ನಿರಂತರ ಪ್ರಾರ್ಥನೆಗಳು ನಡೆಯುತ್ತವೆ. ಕೊನೆಯ ಭೋಜನದ ಬಳಿಕ ಯಹೂದಿಗಳ ಮುಖಂಡರು ಕ್ರಿಸ್ತರಿಗೆ ಶಿಲುಬೆ ಮರಣ ವಿಧಿಸುತ್ತಾರೆ.ಗುರುವಾರ ರಾತ್ರಿಯ ಬಳಿಕ ಪವಿತ್ರ ಸಭೆಯಲ್ಲಿ ಬಲಿಪೂಜೆಗಳು ನಡೆಯುವುದಿಲ್ಲ.ಪವಿತ್ರ ಶುಕ್ರವಾರ ಏಸು ಕ್ರಿಸ್ತರು ಶಿಲುಬೆಗೇರಿದ ಯಾತನೆಯನ್ನು ಪುನರ್ವರ್ತಿಸಲಾಗುತ್ತದೆ. ಶನಿವಾರ ಏಸು ಕ್ರಿಸ್ತರ ಪುನರುತ್ಥಾನದೊಂದಿಗೆ ಮತ್ತೆ ಬಲಿಪೂಜೆಗಳು ಆರಂಭಗೊಳ್ಳುತ್ತವೆ.

ಇಂದು ಬೆಳ್ತಂಗಡಿ ಸಂತ ಲಾರೆನ್ಸ್ ಕ್ಯಾಥೆಡ್ರೆಲ್ ನಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ಲಾರೆನ್ಸ್ ಮುಕ್ಕುಯಿ 12ಜನರ ಪಾದ ತೊಳೆದು ಪವಿತ್ರ ಗುರುವಾರ ಆಚರಿಸಿದರು. ಬಾಕ್ಸ್ ಏಸು ಕ್ರಿಸ್ತರು 2 ಸಾವಿರ ವರ್ಷಗಳ ಹಿಂದೆ ಪಾಸ್ಕಾ ಹಬ್ಬಕ್ಕೆ ಜೆರುಸಲೆಂಗೆ ತೆರಳಿದಾಗ ಸಂಪ್ರದಾಯದಂತೆ ತಮ್ಮ ಶಿಷ್ಯರೊಂದಿಗೆ ಭೋಜನ ಕೂಟ ನಡೆಸಿದರು. ಇದುವೇ ಶಿಷ್ಯರೊಂದಿಗಿನ ಕೊನೆಯ ಭೋಜನವಾಯಿತು. ಆದರೆ ಈ ಭೋಜನವು ವಿವಿಧ ಹೊಸ ಶಕೆಗಳಿಗೆ ಸಾಕ್ಷಿ ನುಡಿಯಿತು. ರೊಟ್ಟಿ ಹಾಗೂ ದ್ರಾಕ್ಷಾರಸ ತೆಗೆದುಕೊಂಡ ಕ್ರಿಸ್ತರು ತನ್ನ ಶಿಷ್ಯರಿಗೆ ನೀಡಿ ಇದು ನನ್ನ ಶರೀರ ಹಾಗೂ ರಕ್ತ ಎಂದು ನೀಡಿದರು ಹಾಗೂ ನನ್ನ ನೆನಪಿಗಾಗಿ ಆಚರಿಸಿ ಎಂದು ಕರೆ ನೀಡಿದರು. ಇಲ್ಲಿಂದ ಕ್ರೈಸ್ತ ಧರ್ಮದಲ್ಲಿ ಬಲಿಪೂಜೆಗಳು ಪ್ರಾರಂಭಗೊಂಡಿತು.

ಕೊನೆ ಭೋಜನದ ವೇಳೆ ಕ್ರಿಸ್ತರು ಸರಳತೆಯ ಸಂಕೇತವಾಗಿ ತನ್ನ 12 ಮಂದಿ ಶಿಷ್ಯರ (ಪಾದತೊಳೆಯುವುದು) ಮಾಡಿದರು. ಏಸು ಕ್ರಿಸ್ತರು ಅರಸನಾದರೂ ವಿಧೇಯತೆಯನ್ನು ತೋರಿದರು. ಪಾದ ತೊಳೆಯುವುದು ಸೇವೆಯ ಪ್ರತೀಕ. ಪರಸ್ಪರ ಪಿರೀತಿಯಿಂದ ಬದುಕಬೇಕೆಂಬುವುದು ಅವರ ಸಂದೇಶವಾಗಿತ್ತು. ಮತ್ತೊಂದೆಡೆ ಯಾಜಕಿ ದೀಕ್ಷೆಯ ಸಂಸ್ಕಾರವನ್ನು ಇದೇ ದಿನ ನೀಡಲಾಯಿತು.

LEAVE A REPLY

Please enter your comment!
Please enter your name here