ಬೆಳ್ತಂಗಡಿ: ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಬೆಳ್ತಂಗಡಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ಸ್ ಆಂಡ್ ಗೈಡ್ಸ್ ಸಹಯೋಗದೊಂದಿಗೆ ಮೇಲಂತಬೆಟ್ಟು ಪದವಿ ಕಾಲೇಜಿನಲ್ಲಿ ಇಲಿ ಜ್ವರ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಬೆಳ್ತಂಗಡಿ ತಾಲೂಕು ಬೂಸ್ಟ್ ಕಲಾತಂಡದಿಂದ ಪ್ರಹಸನ ನಡೆಯಿತು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು.
ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿಎಚ್ಇಒ ಅಮ್ಮಿ, ಬಿಎಚ್ಇಒ ಪುಷ್ಪಾ, ಆರ್‌ಕೆಎಸ್‌ಕೆ ಕೌನ್ಸೆಲರ್ ರಮ್ಯಾ, ಎಸ್‌ಪಿಎಚ್‌ಸಿಒ ಲೀಲಾವತಿ, ಪಿಎಚ್‌ಸಿ ಲೋಲಾಕ್ಷಿ, ಪಿಎಚ್‌ಸಿಒ ಜಯಲಕ್ಷ್ಮೀ, ಬೆಳ್ತಂಗಡಿ ಎಸ್‌ಡಿಎಂ ಆಂಗ್ಲಮಾಧ್ಯಮ ಶಾಲೆಯ ಸ್ಕೌಟ್ ಗೈಡ್ಸ್ ವಿದ್ಯಾರ್ಥಿ ನಿಹಾನ್ ವಿಹಾನ್, ಮಂಜುನಾಥ ದಳದ ಕಬ್ ವಿದ್ಯಾರ್ಥಿ ಅಹಂ ಜೈನ್, ಸ್ಕೌಟ್ಸ್ ಗೈಡ್ಸ್ ನಿರ್ದೇಶಕಿ ಪ್ರಮೀಳಾ ಸಹಕಾರದೊಂದಿಗೆ ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರಕಾಶ್ ನಿರ್ದೇಶನದಂತೆ ತಾಲೂಕು ಮಟ್ಟದಲ್ಲಿ ಇಲಿ ಜ್ವರ ಹಾಗೂ ಇತರ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣ ಕಾರ್ಯಕ್ರಮದಲ್ಲಿ ಪ್ರಹಸನ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
300 ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.