ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಸಂಘ, ಯುವ ರೆಡ್ ಕ್ರಾಸ್ ಘಟಕ, ರೋವರ್ಸ್ ರೆಂಜರ್ಸ್ ಘಟಕಗಳ ಸಂಯೋಗದಲ್ಲಿ ಪ್ಲೇಸ್ಮೆಂಟ್ ಸೆಲ್ನ ಜಂಟಿ ಆಶ್ರಯದಲ್ಲಿ “ನ್ಯೂ ಏಜ್ ಕೆರಿಯರ್ ಆಪರ್ಚುನಿಟಿಸ್” ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ಸುರೇಶ್ ರಾಜ್ ಹಾಗೂ ವೆಂಕಟೇಶ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಪ್ರಸ್ತುತ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಹೊಸ ರೀತಿಯ ತಾಂತ್ರಿಕ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ರೂಡಿಸಿಕೊಂಡಾಗ ಮಾತ್ರ ಉದ್ಯೋಗ ಪಡೆಯಲು ಸಾಧ್ಯ ಎಂದು ವಿವಿಧ ಕೌಶಲ್ಯಗಳ ಬಗ್ಗೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ರಾಘವ ಎನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ವಾಣಿಜ್ಯ ವಿಭಾಗದ ಪ್ರೊಫೆಸರ್ ಪದ್ಮನಾಭ ಕೆ, ಪ್ರೊಫೆಸರ್ ಸುರೇಶ್ ವಿ ಹಾಗೂ ರೋವರ್ಸ್ ರೆಂಜರ್ಸ್ ಘಟಕಗಳ ಡಾ. ರವಿ ಎಂ ಎನ್, ಪ್ರೊಫೆಸರ್ ರಾಜೇಶ್ವರಿ ಎಚ್ಎಸ್ ಹಾಗೂ ಬೋಧಕ ವರ್ಗದವರು ಉಪಸ್ಥಿತರಿದ್ದರು.
ಪವಿತ್ರ ಸ್ವಾಗತಿಸಿ, ಅಶ್ವಿನಿ ವಂದನಾರ್ಪಣೆ ಮಾಡಿದರು.ಪೂರ್ಣಿಮಾ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.