ಏ.8-17: ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಠಬಂಧ ಬ್ರಹ್ಮಕಲಶೋತ್ಸವ, ಜಾತ್ರೋತ್ಸವ- ಪತ್ರಿಕಾಗೋಷ್ಠಿ

0

ಪಡಂಗಡಿ: “ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀ ಕ್ಷೇತ್ರ ಓಡಿಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪಡಂಗಡಿ, ಓಡಿಲ್ನಾಳ, ಕುವೆಟ್ಟು, ಸೊಣಂದೂರು ಗ್ರಾಮಗಳ ಭಕ್ತರ ಸಹಕಾರದಿಂದ
ಅಷ್ಟಬಂಧ ಬ್ರಹ್ಮ ಕಲಶೋತ್ಸವ ಮತ್ತು ಜಾತ್ರೋತ್ಸವವು ಏ.8ರಿಂದ 17ರವರೆಗೆ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ, ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಇವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರಗಲಿದೆ” ಎಂದು ಶ್ರೀ ಮಹಾಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ ಹೇಳಿದರು.

ಮಾ.26ರಂದು ಪತ್ರಿಕಾ ಭವನದಲ್ಲಿಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

“ನಿರಂತರ ಎರಡು ತಿಂಗಳಿಂದ ಸುಮಾರು 3500 ಜನರು ಶ್ರಮದಾನ ಮಾಡಿದ್ದು, ಹೆಚ್ಚಿನ ಎಲ್ಲಾ ಕೆಲಸಗಳು ಶ್ರಮದಾನ ಮೂಲಕ ಸಾಗುತ್ತಿದೆ. ಈಗಾಗಲೇ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಶ್ರೀ ದೇವರ ಗರ್ಭಗುಡಿಯ ಎಡ ನಾಳಿಯ ಮತ್ತು ತೀರ್ಥ ಮಂಟಪದ ಚಾವಣಿಗೆ ತಾಮ್ರದ ಹೊದಿಕೆ, ದೇವಸ್ಥಾನದ ಒಳಂಗಣಕ್ಕೆ ಗ್ರಾನೈಟ್ ಅಳವಡಿಕೆ,ಶ್ರೀ ದೇವರಿಗೆ ಪುಷ್ಕರಣಿ, ನಾಗನ ಕಟ್ಟೆ, ಅಶ್ವತ ಕಟ್ಟೆ, ದೇವರ ಕಟ್ಟೆ, ಅರ್ಚಕರ ವಸತಿಗೃಹ, ಭೋಜನ ಗೃಹ, ದೇವಸ್ಥಾನದ ಒಳಾಂಗಣ ಮತ್ತು ಹೊರಾಂಗಣದ ಆವರಣ ಗೋಡೆ, ಶೌಚಾಲಯ ನಿರ್ಮಾಣ, ಮುಂತಾದ ಕಾಮಗಾರಿಗಳಿಗೆ 4 ಕೋಟಿ ರೂ.ಗಿಂತಲೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಪಡಂಗಡಿ, ಗುರುವಾಯನಕೆರೆ, ಓಡಿಲ್ನಾಳ, ಮಾಲಾಡಿ, ಪಣಕಜೆ, ಮದ್ದಡ್ಕದಿಂದ ಹೊರೆಕಾಣಿಕೆ ನಡೆಯಲಿದ್ದು ಕಿನ್ನಿಗೋಳಿಯಲ್ಲಿ ಸುಮಾರು 15 ಲಕ್ಷ ವೆಚ್ಚದಲ್ಲಿ ಕಾಶಿ ಶೆಟ್ಟಿ ಇವರ ಸೇವಾರ್ಥದಲ್ಲಿ ನಿರ್ಮಾಣಗೊಂಡ ಗೋಪುರವನ್ನು ಉದ್ಘಾಟನೆ ನೆರವೇರಿಸಿ, ಅಲ್ಲಿಂದ ವಿಶಿಷ್ಟ ರೀತಿಯಲ್ಲಿ ಹೊರ ಕಾಣಿಕೆ ದೇವಸ್ಥಾನಕ್ಕೆ ಹೊರಡಲಿದೆ.

1008 ಕಲಶ: 5,000ರೂ.ಗಳ ಕಲಶ ಕೂಪನ್ 1008ಜನರಿಗೆ ಮಾತ್ರ ನೀಡಲಿದ್ದೇವೆ. ಸೇವೆ ಮಾಡುವವರಿಗೆ, ಅಕ್ಕಿ, ಬೆಲ್ಲ, ಸಕ್ಕರೆ ಮುಂತಾದ ವಸ್ತುಗಳು ನಮ್ಮ ಕೌಂಟರ್ ನಲ್ಲಿಯೆ ಇರಲಿವೆ. ಸುಮಾರು 70 ಸಾವಿರ ದಿಂದ 1 ಲಕ್ಷ ಜನರು ಬರುವ ನಿರೀಕ್ಷೆ ಇದೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಜೈನ್, ಕೋಶಾಧಿಕಾರಿ ವಸಂತಗೌಡ ವರಕಬೆ, ಆರ್ಥಿಕ ಸಮಿತಿ ಸಂಚಾಲಕ ಗಂಗಾಧರ ಕೆವುಡೇಲು, ಪ್ರಧಾನ ಕಾರ್ಯದರ್ಶಿ ಚಿದಾನಂದ ಇಡ್ಯ ಉಪಸ್ಥಿತರಿದ್ದರು.

ಧಾರ್ಮಿಕ ಸಭೆ: ಪ್ರತಿದಿನ ಸಂಜೆ 7:30 ರಿಂದ ಧಾರ್ಮಿಕ ಸಭೆ ಜರಗಲಿದ್ದು, ಏ.8ರಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮ ಪ್ರಸಾದ ಅಜಿಲ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಅಧ್ಯಕ್ಷತೆ ವಹಿಸುವರು.

ಏ.9ರಂದು ಶ್ರೀರಾಮ ಕ್ಷೇತ್ರ ಕನ್ಯಾಡಿಯ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹಾಗೂ ವಜ್ರದೇಹಿ ಮಠ ಗುರುಪುರ ಇಲ್ಲಿನ ಶ್ರೀರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿರುವರು.
ಏ.10ರಂದು ಬಾಲವಾಗ್ಮಿ ಹಾರಿಕಾ ಮಂಜುನಾಥ್ ಧಾರ್ಮಿಕ ಉಪನ್ಯಾಸ ನೀಡುವರು.

ಏ.11ರಂದು ಉಪನ್ಯಾಸಕ ಕೇಶವ ಬಂಗೇರ ಉಪನ್ಯಾಸ ನೀಡಲಿರುವರು.

ಏ.12 ರಂದು ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಹಾಗೂ ಒಡಿಯೂರು ಮಹಾಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿರುವರು.

ಏ.13 ರಂದು ವಾಗ್ಮಿ ಶ್ರೀಕಾಂತ ಶೆಟ್ಟಿ ಉಪನ್ಯಾಸ ನೀಡಲಿರುವರು.

ಏ.15 ರಂದು ಮೂಡುಬಿದರೆ ಜೈನ ಮಠದ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡುವರು.

LEAVE A REPLY

Please enter your comment!
Please enter your name here